ಬೆಳಗಾವಿ, ಅ. 12 : ಗರ್ಭಿಣಿ ಮಹಿಳೆಯರ ಭ್ರೂಣ ನಿರ್ವಹಣೆ, ಪ್ರಸವ ಪೂರ್ವ ಆರೈಕೆ ಹಾಗೂ ನಾವಿಣ್ಯ ಪರಿಹಾರಗಳನ್ನು -ಮನೆಯಲ್ಲಿಯೇ ಕುಳಿತು ಉತ್ತಮ ರೀತಿಯಲ್ಲಿ ಗರ್ಭಿಣಿ ಮಹಿಳೆಯರ ಆರೋಗ್ಯ ನಿರ್ವಹಿಸಲು ಸಹಕಾರಿಯಾಗುವ ಒಂಡಂಬಡಿಕೆಗೆ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಹಾಗೂ ಅಮೇರಿಕೆಯ ಕೆಂಚ್ಯುಟಿ ಫಿಟಲ್‌ ಲೈಫ್‌ ನಡುವೆ ಒಡಂಬಡಿಕೆಯಾಗಿದ್ದು, ಬೆಳಗಾವಿಯಲ್ಲಿಂದು ಕಾಹೆರ ಕುಲ ಸಚಿವರಾದ ಡಾ. ಎಂ ಎಸ್‌ ಗಣಾಚಾರಿ ಹಾಗೂ ಫೆಟಲ್ ಲೈಫನ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ ದ್ರೋನಾವತ ಅವರು ಸಹಿ ಹಾಕಿದರು.

ಅತ್ಯಾಧುನಿಕ ಮತ್ತು ಸುಧಾರಿತ ತಂತ್ರಜ್ಞಾನದಿಂದ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯವನ್ನು ಮನೆಯಲ್ಲಿಯೇ ಕುಳಿತು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಕಾರಿಯಾಗುವಂತೆ ಭ್ರೂಣದ ನಿರ್ವಹಣಾ ಸಾಧನವನ್ನು ಪ್ರಾಯೋಗಿಕವಾಗಿ ನಡೆಸುವಲ್ಲಿ ಈ ಒಡಂಬಡಿಕೆಯು ಮುಖ್ಯವಾಗಿದೆ. ಇದರಿಂದ ಗರ್ಭಿಣಿಯರಲ್ಲಿ ಉಂಟಾಗುವ ಅಪಾಯ ಮತ್ತು ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ, ಕ್ಯಾಂಟಿನಿಯೋದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧೀಂದ್ರ ಮೊಖಾಸಿ, ಡಾ. ವಿ.ಎ.ಕೋಠಿವಾಲೆ, ಡಾ. ಯಶಿತಾ ಪೂಜಾರ್, ಡಾ.ಹೇಮಾ ಪಾಟೀಲ್ ಮತ್ತು ಡಾ.ಮಂಜುನಾಥ ಹುಕ್ಕೇರಿ ಉಪಸ್ಥಿತರಿದ್ದರು.