ಕೆಎಲ್‌ಇ ಸಂಸ್ಥೆಯು ನೂತನವಾಗಿ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿಂಬಾಗದಲ್ಲಿ ಆರಂಭಿಸಿರುವ ಕ್ಯಾನ್ಸರ ಆಸ್ಪತ್ರೆಯಲ್ಲಿ ಬಸವ ಜಯಂತಿ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು “ರೇಡಿಯೇಶನ್ ಆಂಕೊಲಾಜಿ” ಸೇವೆಗಳನ್ನು ಜನರಿಗೆ ಅರ್ಪಿಸಿದರು.
ಹೊಸದಾಗಿ ಪ್ರಾರಂಭಿಸುತ್ತಿರುವ ಆಸ್ಪತ್ರೆಯಲ್ಲಿ ಕ್ಯಾನ್ಸರ ಸಂಬಂಧಿ ಎಲ್ಲ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಕಲ್ಪಿಸಲು ಉದ್ದೇಶಿಸಲಾಗಿದ್ದು, ರೆಡಿಯೇಶನ್ ಅಂಕೊಲಾಜಿ ಘಟಕದ ಸೇವೆಯನ್ನು ಪ್ರಾರಂಭಿಸಿದರು. ರೆಡಿಯೇಶನ್ ಆಂಕೊಲಾಜಿ ವಿಭಾಗದಲ್ಲಿ ವಿಶ್ವದ ಅತ್ಯುತ್ತಮವಾದ ಅತ್ಯಾಧುನಿಕ ರೇಡಿಯೊಥೆರಪಿ ಯಂತ್ರಗಳನ್ನು ಅಳವಡಿಸಲಾಗಿದ್ದು, ಅಡ್ಡಪರಿಣಾಮಗಳನ್ನು ಕಡಿಮೆಗೊಳಿಸುವದರೊಂದಿಗೆ ಗುಣಮಟ್ಟದ ನಿಖರವಾದ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿವೆ ಎಂದು ಡಾ. ಪ್ರಭಾಕರ ಕೋರೆ ಅವರು ತಿಳಿಸಿದರು.
ವಿಶ್ವದರ್ಜೆಯ ಗುಣಮಟ್ಟದ ಅತ್ಯಂತ ಸುಧಾರಿತ ಅತ್ಯಾಧುನಿಕ ಕೌಶಲ್ಯವುಳ್ಳ ರೇಡಿಯೇಶನ್ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಿದ್ದು, ಭಾರತದಲ್ಲಿಯೇ ಪ್ರಥಮವಾಗಿ ಎಸ್ ಆರ್ ಎಸ್ ಕೋನ್ಸ, ಮೊಬಿಯಸ್ 3ಡಿ ವೆಲೊಸಿಟಿ ವೇಗದ ಸಮಗ್ರ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಎಂಡ್ ಹೈಪರ್‌ಆರ್ಕ್ ಟ್ರೂಬೀಮ್ ಹೊಂದಿದೆ. ಸ್ಟೀರಿಯೊಟಾಕ್ಟಿಕ್ ಆರ್ಟಿ – ನಿರ್ಣಾಯಕ ಸ್ಥಳಗಳಲ್ಲಿ ನಿಖರವಾದ ಚಿಕಿತ್ಸೆ. ವೇಗವಾದ ಚಿಕಿತ್ಸೆಯ ಸಮಯ. ಉಸಿರಾಟದ ಚಲನೆಯ ನಿರ್ವಹಣೆ, ಚಲಿಸುವ ಗೆಡ್ಡೆಗಳನ್ನು ಗುರಿಯಾಗಿಸುವುದು, ಜ್ಞಾನ ಆಧಾರಿತ ಯೋಜನೆಯು ದೋಷವನ್ನು ಕಡಿಮೆ ಮಾಡುತ್ತದೆ. ರೋಗಿಯ ನಿರ್ದಿಷ್ಟ ಗುಣಮಟ್ಟದ ಭರವಸೆಯೊಂದಿಗೆ ನಿಖರವಾದ ಡೋಸ್ ನೀಡಲು ಸಹಕರಿಸುತ್ತದೆ. ಅಲ್ಲದೆ ಬ್ರಾಕಿ ಚಿಕಿತ್ಸೆಗೆ ಸಹಕಾರಿಯಾಗುವ ಬೆಬಿಗ ಸಾಗಿನೊವಾ ಯಂತ್ರ ಅಳವಡಿಸಿದ್ದು ಇದರಿಂದ ಗಡ್ಡೆಮೇಲೆ ಮತ್ತು ಒಳಗೆ ನಿರ್ಧಾರಿತವಾದ ಚಿಕಿತೆ ನೀಡುತ್ತದೆ. ಸಮಗ್ರ ತಪಾಸಣೆಗಾಗಿ ಪಿಟಿಡಬ್ಲು ಬೀಮ ಮತ್ತು ಡೋಸಿಮೆಟ್ರಿ ಉಪಕರಣ, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಐಸಿಬಿಸಿಟಿ ಹಾಲ್ಕಾಯನ್ ಇಲೈಟ್ ಯಂತ್ರ ಹಾಗೂ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಥಮವಾಗಿ ವೈಡ್ ಬೋರ್ ಸಿಟಿ ಸಿಮ್ಯುಲೇಟರ್ ಸಂಯೋಜಿತ ಲೇಸರ್ ಮತ್ತು 192 ಸ್ಲೈಸ್‌ಗಳ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಮಹಾಂತೇಶ ಕವಟಗಿಮಠ, ಆಶಾತಾಯಿ ಕೋರೆ, ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ, ಡಾ. ವಿ ಎ ಕೋಠಿವಾಲೆ, ಡಾ. ವಿ ಡಿ ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ, ರೆಡಿಯೇಶನ್ ಅಂಕೊಲಾಜಿ ಮುಖ್ಯಸ್ಥರಾದ ಡಾ. ಇಮ್ತಿಯಾಜ ಅಹ್ಮದ, ಡಾ.ಕುಮಾರ ವಿಂಚುರಕರ, ಡಾ. ಮಹೇಶ ಕಲ್ಲೋಳ್ಳಿ, ಡಾ. ರೋಹನ ಭಿಸೆ, ಡಾ. ಸಂತೋಷ ಮಠಪತಿ, ಡಾ. ಅಭಿಲಾಶಾ ಸಂಪಗಾರ, ಡಾ. ರಾಜೇಂದ್ರ ಮೆಟಗುಡಮಠ, ಡಾ. ಸಪ್ನಾ, ಡಾ ರಾಘವೇಂದ್ರ ಸಾಗರ, ಡಾ. ರೋಹಿತ ಪಾಟೀಲ, ಡಾ. ಸ್ವಾತಿ ಗೌಡರ, ಡಾ. ರಶ್ಮಿ ಪಾಟೀಲ, ಡಾ. ಆದರ್ಶ ಸಾಣಿಕೊಪ್ಪ, ಭೂಪಾಲನ್ ಬಾಲಾಜಿ ಸೇರಿದಂತೆ ಉಪಸ್ಥಿತರಿದ್ದರು.