ಬೆಳಗಾವಿ : ಕಿತ್ತೂರಿನ ಧಣಿ, ನೇಗಿನಹಾಳ ಗ್ರಾಮದ ಜನತೆಗೆ ಪ್ರೀತಿಯ ರಾವಸಾಹೇಬ ಎಂದು ಕರೆಯಲ್ಪಡುತ್ತಿದ್ದ ಶುದ್ದ ಹಸ್ತದ ರಾಜಕಾರಣಿ ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 74 ವರ್ಷ ವಯಸ್ಸಿನ ಡಿ ಬಿ ಇನಮಾದಾರ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
02/07/1950 ಜನಿಸಿದ ಡಿ ಬಿ.ಇನಾಮದಾರ ಅವರು ತಂದೆಯ ಕನಸಿನ ಮಾದರಿ ರಾಣಿ ಶುಗರ್ಸ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ದಶಕಗಳ ಕಾಲ ಮುನ್ನಡೆಸಿಕೊಂಡು ಬಂದಿದ್ದರು. 1983ರಲ್ಲಿ ಪ್ರಥಮ ಬಾರಿಕೆ ಶಾಸಕರಾಗಿ ವಿಧಾನ ಸಭೆ ಪ್ರವೇಶಸಿದ ಅವರು, 1985ರಲ್ಲಿ ದ್ವಿತೀಯ ಬಾರಿಗೆ ಶಾಸಕರಾದರು.1994, 1999 ಮತ್ತು 2013 ರಲ್ಲಿ ಶಾಸಕರಾಗಿ ಒಟ್ಟು 5 ಬಾರಿ ಆಯ್ಕೆಯಾಗಿದ್ದಾರೆ.
1983ರಲ್ಲಿ ಶಾಸಕರಾದ ಪ್ರಥಮ ಅವಧಿಯಲ್ಲಿಯೇ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಎರಡನೇ ಸಲ 1985ರಲ್ಲಿ ಆರೋಗ್ಯ ಸಚಿವರಾಗಿ ಮೂರನೇ ಸಲ 1987ರಲ್ಲಿ ಅಬಕಾರಿ ಸಚಿವರಾಗಿ ಸಂಪುಟ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿರುತ್ತಾರೆ. ತದನಂತರದಲ್ಲಿ 1999 ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು. 2000ರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ. ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.