ಆಧುನಿಕತೆಯ ಭರದಲ್ಲಿ ಪಾಶ್ಚಿಮಾತ್ಯ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದಾಗಿ ಅನಾರೋಗ್ಯವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಶ್ರಮವಿಲ್ಲದ ಜೀವನ, ವ್ಯಾಯಾಮ ಇಲ್ಲದಿರುವದು, ಪೌಷ್ಠಿಕಾಂಶಭರಿತ ಆಹಾರ ಸೇವಿಸದೇ ಕೇವಲ ಫಾಸ್ಟಪುಡ್ ಮೇಲೆ ದಿನ ದೂಡುವದರಿಂದ ನಮಗೆ ಅರಿವಿಲ್ಲದಂತೆ ಬೊಜ್ಜು ಅಥವಾ ಸ್ಥೂಲಕಾಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ಬೊಜ್ಜು ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರಿ, ವಿವಿಧ ರೋಗಗಳಿಗೆ ಆಹ್ವಾನ ನೀಡುತ್ತದೆ. ಮುಖ್ಯವಾಗಿ ಮಧುಮೇಹ ಹಾಗೂ ಹೃದಯ ಸಂಬAಧಿ ಖಾಯಿಲೆಗಳಿಂದ ಬಳಲಬೇಕಾಗುತ್ತದೆ. ಆದ್ದರಿಂದ ಬೊಜ್ಜು ಇದ್ದರೆ ಕರಗಿಸಿಕೊಳ್ಳಿ ಇಲ್ಲದಿದ್ದರೆ ಬರದಂತೆ ಎಚ್ಚರವಹಿಸಿ.

ಬೊಜ್ಜು ಬರಲು ಕಾರಣಗಳೇನು?
ದೇಹದ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರೆ ಅದನ್ನು ಬೊಜ್ಜು ಎಂದು ಕರೆಯಲಾಗುತ್ತದೆ. ಬೊಜ್ಜು ದೇಹವಿದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ದೈಹಿಕ ಶ್ರಮವಿಲ್ಲದೇ ದಿನವಿಡಿ ಕುಳಿತುಕೊಂಡು ಕೆಲಸ ಮಾಡುವದು, ವ್ಯಾಯಾಮದ ಕೊರತೆ, ಆಧುನಿಕ ಆಹಾರ ಹಾಗೂ ಜೀವನಶೈಲಿಗಳು ದೇಹದಲ್ಲಿ ಬೊಜ್ಜು ಸಂಗ್ರಹಗೊಳ್ಳಲು ಕಾರಣ. ದೇಹವು ಕ್ರಿಯಾಶೀಲವಾಗಿರದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹ
ಇನ್ಸುಲಿನ್ ಇದೊಂದು ರ‍್ಮೋನ್. ಉದರದ ಸಮೀಪವಿರುವ ಪಾನಕ್ರಿಯಾ ಎಂಬ ಗ್ರಂಥಿಯಿAದ ಇದು ಬಿಡುಗಡೆಯಾಗುತ್ತದೆ. ಮಧುಮೇಹದಿಂದಾಗಿ ಇನ್ಸುಲಿನ್ ಹರ‍್ಮೋನು ದೇಹಕ್ಕೆ ಬೇಕಾಗುವ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುವುದಿಲ್ಲ. ಹೀಗಾಗಿ ದೇಹದ ವಿವಿಧ ಜೀವಕೋಶಗಳಿಗೆ ಸಕ್ಕರೆ ಅಂಶ ತಲುಪದೇ ಹೆಚ್ಚಿನ ರಕ್ತನಾಳದಲ್ಲಿ ಉಳಿದುಕೊಳ್ಳುವದರಿಂದ ತೊಂದರೆ ಪ್ರಾರಂಭವಾಗುತ್ತದೆ. ಇದನ್ನು ಹೈಪರಗ್ಲೆಸೆಮಿಯಾ ಅಥವಾ ಅಧಿಕ ಸಕ್ಕರೆ ರೋಗ ಎಂದು ಕರೆಯುತ್ತಾರೆ. ದೇಹದ ತೂಕವು ಅಧಿಕವಾಗಿದ್ದರೆ, ಇನ್ಸುಲಿನ್ ಪ್ರತಿರೋಧಕದಿಂದಾಗಿ ರಕ್ತದಲ್ಲಿನ ಸಕ್ಕರೆ ಅಂಶವು ವಿವಿಧ ಅಂಗಾAಶಗಳಿಗೆ ತಲಪುವದು ಕಠಿಣವಾಗುತ್ತದೆ.

ಮಧುಮೇಹಿಗಳಲ್ಲಿ ತೀವ್ರ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳಬಹುದು. ಟೈಪ್-2 ಮಧುಮೇಹವು ವಂಶವಾಹಿಗಳ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಆ ವ್ಯಕ್ತಿಯ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವು ಬರುವ ಸಾಧ್ಯತೆಯು ಐದರಿಂದ ಹತ್ತು ಪಟ್ಟು ಹೆಚ್ಚಾಗಿರುವುದು. ಟೈಪ್-2 ಮಧುಮೇಹದಿಂದಾಗಿ ಜನನದ ವೇಳೆ ಮಗುವಿನ ತೂಕವು ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿರುವುದು.

ಕಿಡ್ನಿ ಸಮಸ್ಯೆ
ದೇಹದ ಅಂಗಾAಗಳಲ್ಲಿ ಮೂತ್ರಪಿಂಡ ಅತೀ ಮುಖ್ಯವಾದದ್ದು. ಶರೀರದ ಪ್ರಧಾನ ಶುದ್ದೀಕರಣ ಘಟಕಗಳಾದ ಇವು ಜೀವರಸಾಯನಿಕ ಕ್ರಿಯೆಗಳಿಗೆ ಬೇಕಾದ ಜೈವಿರಸಗಳನ್ನು ಉತ್ಪಾದಿಸಿ ಪೋಷಣೆ ಹಾಗೂ ಸಮತೋಲನೆ ಕರ‍್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನವನ ಶರೀರದಲ್ಲಿ ಅವರೇಕಾಳು ಆಕಾರದ ಎರಡು ಮೂತ್ರಪಿಂಡಗಳಿರುತ್ತವೆ. 2 ರಿಂದ 3 ಇಂಚು ಅಗಲ ಹಾಗೂ 4 ರಿಂದ 5 ಇಂಚು ಉದ್ದವಾಗಿರುವ ಇವು ಎರಡೂ ಪಾರ್ಶ್ವದ ಪಕ್ಕ ಸ್ಥಿತವಾಗಿರುತ್ತವೆ.

ಪ್ರತಿ ಮೂತ್ರಪಿಂಡದಲ್ಲಿ ಲಕ್ಷಾಂತರ ಮೂತ್ರಕೋಶಾಣು (ಓeಠಿhಡಿoಟಿ) ಗಳಗಳಿರುತ್ತವೆ. ಮೂತ್ರಕೋಶಗಳು ರಕ್ತವನ್ನು ಸೋಸಿ ವಿಷಕಾರಿ ಅಂಶವನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಯಾವಾಗ ಇವು ತಮ್ಮ ಶುದ್ದೀಕರಣ ಕರ‍್ಯವನ್ನು ನಿಲ್ಲಿಸುತ್ತವೆಯೋ ಆಗ ಮೂತ್ರಪಿಂಡ ವೈಫಲ್ಯ (ಞiಜಟಿeಥಿ ಜಿಚಿiಟuಡಿe) ಉಂಟಾಗುತ್ತದೆ. ದೇಹದಲ್ಲಿನ ತೂಕವು ಹೆಚ್ಚಾದರೆ ಆಗ ಕಿಡ್ನಿಯು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಲು ಹೆಚ್ಚೆಚ್ಚು ಕೆಲಸ ಮಾಡಬೇಕಾಗುತ್ತದೆ. ಅತಿಯಾಗಿ ಕಿಡ್ನಿಯು ಕಾರ್ಯನಿರ್ವಹಿಸಿದರೆ ಆಗ ಕಿಡ್ನಿಯ ವೈಫಲ್ಯಕ್ಕೆ ಕಾರಣವಾಗುವುದು.

ದೈಹಿಕ ಚಟುವಟಿಕೆ
ಕಚೇರಿ ಅಥವಾ ಮನೆಯಲ್ಲಿ ಸಾಕಷ್ಟು ಕಾರ್ಯದೊತ್ತಡ ಇದ್ದರೂ ಕೂಡ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಗಂಟೆಗೊಮ್ಮೆಯಾದರೂ ಕುರ್ಚಿಯಿಂದ ಎದ್ದು ಆಚೀಚೆ ನಡೆದಾಡಿರಿ. ಸ್ವಲ್ಪ ವೇಳೆ ನಿಂತುಕೊಳ್ಳುವದು ಒಳ್ಳೆಯ ಅಭ್ಯಾಸ. ದಿನಕ್ಕೆ 30-45 ನಿಮಿಷ ಕಾಲ ವ್ಯಾಯಾಮ ಮಾಡಬೇಕು. ದಿನನಿತ್ಯವೂ ನೀವು ನಡೆಯುವಂತಹ ಅವಧಿ ಹೆಚ್ಚಿಸಿಕೊಳ್ಳಿ. ದೈಹಿಕ ಚಟುವಟಿಕೆಯಲ್ಲಿ ಹೆಚ್ಚಳವಾದರೆ ಆಗ ಖಂಡಿತವಾಗಿಯೂ ಬೊಜ್ಜು ಕಡಿಮೆಯಾಗುತ್ತದೆ.

ಆಹಾರ
ದೇಹವು ಬಳಸಿಕೊಳ್ಳುವ ಶಕ್ತಿಗಿಂತ ಹೆಚ್ಚಿನ ಕ್ಯಾಲರಿ ಸೇವನೆ ಮಾಡಿದರೆ ಅತಿಯಾದ ತೂಕ ಮತ್ತು ಬೊಜ್ಜು ಕಾಡಬಹುದು. ಕೆಲವೊಂದು ಆಹಾರಗಳಲ್ಲಿ ಹೆಚ್ಚಿನ ಕ್ಯಾಲರಿ ಇರುವದರಿಂದ ದೇಹದ ತೂಕವು ಹೆಚ್ಚಾಗುವುದು. ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಸೇವನೆ ಅಧಿಕಬೊಜ್ಜಿಗೆ ಕಾರಣ.
ಕೊಬ್ಬಿನಾಂಶ ಮತ್ತು ಸಂಸ್ಕರಿಸಿದ ಮಾಂಸ ತ್ಯಜಿಸಿ, ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ.

ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ. ಹಣ್ಣು, ತರಕಾರಿ ಹಾಗೂ ಧಾನ್ಯಗಳು ದೇಹದ ತೂಕ ಹೆಚ್ಚಳವಾಗುವುದನ್ನು ತಡೆಯುತ್ತವೆ. ಆದರೆ ಅಧಿಕ ಸಕ್ಕರೆ ಅಂಶ ಹೊಂದಿರುವAತಹ ಕುಕ್ಕೀಸ್, ಚಾಕಲೇಟ್, ಕೆಚಪ್, ಕ್ಯಾನ್ ಮತ್ತು ಪ್ಯಾಕ್ ಮಾಡಲ್ಪಟ್ಟ ಆಹಾರಗಳಾದ ಜ್ಯೂಸ್, ಸೋಡಾ, ಆಲ್ಕೋಹಾಲ್ ಪಾನೀಯ ಹಾಗೂ ಸಂಸ್ಕರಿಸಿದ ಮಾಂಸವು ಬೊಜ್ಜಿಗೆ ಕಾರಣವಾಗುತ್ತದೆ. ಆದ್ದರಿಂದ ಇವುಗಳನ್ನು ತ್ಯಜಿಸಿ ಅಥವಾ ಕಡಿಮೆ ಸೇವಿಸಿ.

ಒತ್ತಡ ನಿಭಾಯಿಸಿ
ಒತ್ತಡದ ಜೀವನವು ನಿದ್ರಾಹೀನತೆ ಮತ್ತು ಅನಾರೋಗ್ಯಕರ ಆಹಾರ ಕ್ರಮಕ್ಕೆ ನಾಂದಿ ಹಾಡುತ್ತದೆ. ಅನಿಯಮಿತ ನಿದ್ರೆಯಿಂದಾಗಿ ಹೃದ್ರೋಗ, ಬೊಜ್ಜು ಮತ್ತು ಮಧುಮೇಹವು ಕಂಡುಬರುತ್ತದೆ. ಖಿನ್ನತೆ ಮತ್ತು ಆತಂಕದಿAದಾಗಿ ತೂಕ ಹೆಚ್ಚಳವಾಗುವುದು. ಏಕೆಂದರೆ ಭಾವನಾತ್ಮಕ ಒತ್ತಡ ಕಡಿಮೆ ಮಾಡಲು ಜನರು ಆಹಾರದ ಮೊರೆ ಹೋಗುವರು. ಹಾರ್ಮೋನ್ ಬದಲಾವಣೆ ಆಗಿ ಹಸಿವು ಹೆಚ್ಚಾಗಬಹುದು. ಕ್ಯಾಲರಿ ಮತ್ತು ಕಾರ್ಬೋಹೈಡ್ರೇಟ್ಸ್ ಅಧಿಕವಾಗಿರುವ ಆಹಾರದ ಬಯಕೆ ಹೆಚ್ಚಾಗಬಹುದು.

ನಿದ್ರಾಹೀನತೆಯಿಂದಾಗಿ ತೂಕದ ಮೇಲೆ ಪರಿಣಾಮ ಬೀರಿ, ಮಾನಸಿಕ ಆರೋಗ್ಯಕ್ಕೂ ತೊಂದರೆಯುAಟಾಗುತ್ತದೆ. ಆದ್ದರಿಂದ ಮಾನಸಿಕ ಅರೋಗ್ಯಕ್ಕೆ ಆದ್ಯತೆ ನೀಡಿ. ಪ್ರತಿದಿನ ಹತ್ತು ನಿಮಿಷ ಧ್ಯಾನ ಮಾಡಿ. ನಿದ್ರಾಹೀನತೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮನ್ನುಂಟು ಮಾಡುತ್ತದೆ. ದಿನಕ್ಕೆ ಕನಿಷ್ಠ ಏಳು ಗಂಟೆ ನಿದ್ರೆ ಮಾಡಬೇಕು. ಸರಿಯಾಗಿ ನಿದ್ರೆ ಮಾಡಿದರೆ ಆಗ ದೈಹಿಕವಾಗಿಯೂ ಚಟುವಟಿಕೆಯಿಂದ ಇರಬಹುದು.

ಬಸವರಾಜ ಸೊಂಟನವರ