ಸವದತ್ತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೌರಭ ಆನಂದ ಛೋಪ್ರಾ ಅವರ ಗೋದಾಮು ಮೇಲೆ ದಾಳಿ ಮಾಡಿದ ಎಫ್ಎಸ್ಟಿ ಹಾಗೂ ಜಿಎಸ್ಟಿ ಅಧಿಕಾರಿಗಳ ತಂಡವು ಸುಮಾರು 23,84,272 ರೂ. ಮೌಲ್ಯದ 1012 ಹೊಲಿಗೆ ಯಂತ್ರ, 4,56,000 ಮೌಲ್ಯದ 1200 ಹೋಲಿಗೆ ಯಂತ್ರದ ಟೇಬಲ್, 11,27,840 ರೂ.ಗಳ ಮೌಲ್ಯದ 1060 ಸ್ಟ್ಯಾಂಡ್ ಹಾಗೂ 3,24,000 ಮೌಲ್ಯದ 2160 ಟಿಪಿನ್ ಬಾಕ್ಸಗಳು ಸೇರಿದಂತೆ ಒಟ್ಟು 42,92,112 ರೂ.ಗಳ ಮೌಲ್ಯದ ಸಾಮಗ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.