ಬೆಳಗಾವಿ

ಬೆಳಗಾವಿ ಬಿಜೆಪಿ ಅಭ್ಯರ್ಥಿ ಪರ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರು ಬೆಳಗಾವಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ ಅವರು, ವಾರ್ಡ ನಂಬರ 43ರಲ್ಲಿ ಬರುವ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು, 

ಇಂದು ಶಂಕರಾಚಾರ್ಯರ ಜಯಂತಿ ಅರಿತಿದ್ದ ಕೇಶವ ಪ್ರಸಾದ ಮೌರ್ಯ ಅವರು, ಅವರ ಫೊಟೊಗೆ ಭಕ್ತಿಪೂರ್ವಕ ನಮಿಸಿ, ಪ್ದರಚಾರ ಕಾರ್ಯ ಮುಂದುವರೆಸಿದರು. ಇದೇ ಸಂದರ್ಭದಲ್ಲಿ ವಾರ್ಡ ನಿವಾಸಿಗಳು ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಶಾಸಕ ಅಭಯ ಪಾಟೀಲರಿಗೆ ಆರತಿ ಮಾಡಿ ಹೂವಿನ ವೃಷ್ಟಿ ಹರಿಸಿ ಸ್ವಾಗತಿಸಿದರು,

ನಗರ ಸೇವಕಿ ವಾಣಿ ಜೋಶಿ ಮತ್ತು ದೇವಸ್ಥಾನ ಕಮೀಟಿ ಪರವಾಗಿ ಸಂಜೀವ ಕುಲಕಣರ್ಿ ಅವರು ಉಪಮುಖ್ಯಮಂತ್ತಿಗಳನ್ನು ಸನ್ಮಾನಿಸಿದರು.

ನಂತರ ಕೇಶವ ಪ್ರಸಾದ ಮೌರ್ಯ ಅವರು ಸಂಜೆ ಖಾಸಬಾಗ, ಶಹಾಪುರ ಪ್ರದೇಶದಲ್ಲಿ ರೋಡ್ ಶೋ ನಡೆಸಿದರು,  ಕೆಲವೆಡೆ ಪಾದಯಾತ್ರೆ ನಡೆಸಿ ಮತ ಯಾಚನೆ ಮಾಡಿದರು.