ತಂದೆ ಬಿ. ಡಿ. ಇನಾಮದಾರ ಅವರ ನಿಧನದ ನಂತರ ಚಿರ ಯವ್ವನದ ಯುವಕ ಸಹಕಾರಿ ಕ್ಷೇತ್ರದ ರಾಣಿ ಶುಗರ್ಸ ಸಕ್ಕರೆ ಕಾರಖಾನೆ ಮೂಲಕ ರಾಜಕೀಯ ಕಣಕ್ಕೀಳಿದರು. ನಿಜವಾಗಿಯೂ ಗೌಡಕೀಯ ಗಮ್ಮತ್ತು, ಅಧಿಕಾರ ಹಣ ಆಸ್ತಿ ಎಲ್ಲವೂ ಇದ್ದರೂ ಕೂಡ ರಾಜಕೀಯ ಚದುರಂಗದಾಟಕ್ಕೆ ಅವಶ್ಯವಿರುವ ತಾಳ್ಮೆ ಅವರಲ್ಲಿ ಮೈಗೂಡಿಸಿಕೊಂಡಿತ್ತು. ಏನ ಎಪ್ಪ ಎನ್ನುತ್ತಲೇ ಜನರ ಮನಸ್ಸಿನಲ್ಲಿ ಪ್ರೀತಿಯ ಭಾವವನ್ನು ಮೂಡಿಸುತ್ತಿದ್ದ ಡಿ ಬಿ ಇನಾಮದಾರ ಅವರು ರಾಜನಾಗಿಯೇ ಇದ್ದವರು. ಸ್ವಾತಂತ್ರ್ಯದ ನಂತರವೂ ಕೂಡ ಕಿತ್ತೂರು ನಾಡಿಗೆ ಅವರೇ ಧಣಿಗಳು. ಬೆಂಗಳೂರಿನ ಐಟಿ ಉದ್ಯಮ ವಿಶ್ವಪ್ರಸಿದ್ದಗೊಳ್ಳಲು ಇನಾಮದಾರ ಅವರು ಪ್ರಮುಖ ಕಾರಣೀಕರ್ತರು.
ತಾವಿದ್ದ ಪಕ್ಷಕ್ಕೆ ನಿಷ್ಠೆ ಹಾಗೂ ಸ್ವಾಭಿಮಾನದ ಮೂಲಕ ಪಕ್ಷದ ಸಿದ್ದಾಂತಗಳಿಗೆ ಒತ್ತು ಕೊಟ್ಟು ಪಕ್ಷಕ್ಕೆ ಭದ್ರ ನೆಲೆಯೊದಗಿಸಿ ಕೊಟ್ಟವರು. ತಮ್ಮದೇ ಆದ ಮೌಲ್ಯಗಳನ್ನು ಅಳವಡಿಸಿಕೊಂಡ ಶುದ್ಧ ಹಸ್ತದ ಇನಾಮದಾರ ಅವರು ಮೌಲ್ಯಾಧಾರಿತ ರಾಜಕಾರಣಿ.
9 ಬಾರಿ ವಿಧಾನಸಭೆ ಸ್ಫರ್ಧಿಸಿ ಅದರಲ್ಲಿ 5 ಚುನಾವಣೆಯಲ್ಲಿ ವಿಜಯಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡರೆ, ನಾಲ್ಕರಲ್ಲಿ ಸೋಲನ್ನುಭವಿಸಿದ್ದಾರೆ. ರೈತ ಸಂಘವು ಉನ್ನತ ಕಾಲಘಟ್ಟದಲ್ಲಿದ್ದಾಗ ಅವರ ರಾಜಕೀಯ ವೈರಿಯಾಗಿದ್ದ ಬಾಬಾಗೌಡ ಪಾಟೀಲ ಅವರನ್ನು ಹೊರತು ಪಡಿಸಿದರೆ, ಅವರ ರಾಜಕೀಯ ಗರಡಿಯಲ್ಲಿ ಬೆಳೆದ ಶಿಷ್ಯವೃಂದವೇ ಅವರನ್ನು ಸೋಲಿಸಿದರು. ಅದರಲ್ಲಿ ಸುರೇಶ ಮಾರಿಹಾಳ ಹಾಗೂ ಮಹಾಂತೇಶ ದೊಡ್ಡಗೌಡರ ಪ್ರಮುಖರು.
ಜಾತಿ ರಾಜಕಾರಣದಿಂದ ದೂರವಿದ್ದ ಇನಾಮದಾರ ಅವರು ಎಂದಿಗೂ ಯಾರ ಶತೃತ್ವವನ್ನು ಕಟ್ಟಿಕೊಂಡವರಲ್ಲ.ಅಜಾತಶತ್ರು ಇದ್ದ ಅವರು ಇತ್ತೀಚೆಗೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ವಸತಿ ಸೈನಿಕ ಶಾಲೆಯ ಚೇರಮನ್ನರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
1883ರಲ್ಲಿ ಅಂದಿನ ಜನತಾ ಪಕ್ಷದಿಂದ ಕಿತ್ತೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇನಾಮದಾರ ಅವರು ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂ. ಎನ್. ನಾಗನೂರ ಅವರನ್ನು ಪರಾಭವಗೊಳಿಸಿದ್ದರು. ಮೊದಲ ಆಯ್ಕೆಯಲ್ಲಿಯೇ ಗಣಿ ಮತ್ತು ಭೂಗರ್ಭ ಖಾತೆ ರಾಜ್ಯ ಸಚಿವರಾದರು. ಮುಂದೆ ಓಬಂದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜಿಸಿ, ಹೊಸ ಜನಾದೇಶ ಪಡೆಯಲು ಮುಂದಾದರು. ಮತ್ತೆ ಸ್ಪರ್ಧಿಸಿದ್ದ ಇನಾಮದಾರ ಈಗಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ತಂದೆ ಬಸವಂತರಾಯ ದೊಡ್ಡಗೌಡರ ಅವರನ್ನು ಪರಾಭಗೊಳಿಸಿದ್ದರು. ಮತ್ತೆ ಹೆಗಡೆ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಸಿಕ್ಕಿತು.
1989ರಲ್ಲಿ ರೈತಸಂಘದ ಪ್ರಭಾವ ಈ ಭಾಗದಲ್ಲಿ ದೊಡ್ಡದಾಗಿತ್ತು. ಹಳ್ಳಿ, ಹಳ್ಳಿಗಳಲ್ಲಿ ಜನಸಂಘಟನೆ ಮಾಡಿ ಬಹುದೊಡ್ಡ ಜನಶಕ್ತಿಯನ್ನು ಬಾಬಾಗೌಡ ಪಾಟೀಲ ಹೊಂದಿದ್ದರು. ಆ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಿತ್ತೂರು ಹಾಗೂ ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಬಾಬಾಗೌಡರು ಆಯ್ಕೆಯಾಗಿ ಬಂದಿದ್ದರು. ಜನತಾಪಕ್ಷ ಒಡೆದು ಜನತಾದಳವಾಗಿ ರೂಪಾಂತರಗೊಂಡಿತು. ಜನತಾದಳ ತೊರೆದು 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. 1994ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಇನಾಮದಾರ, ಪುನರಾಯ್ಕೆ ಬಯಸಿದ್ದ ರೈತಸಂಘದ ಬಾಬಾಗೌಡರನ್ನು ಸೋಲಿಸಿದರು.
1999 ರಲ್ಲಿ ನಡೆದ ಚುನಾವಣೆಯಲ್ಲಿ ಪುನರಾಯ್ಕೆಗೊಂಡು, ಎಸ್. ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ, ಅನಂತರ ನಡೆದ ಪುನರ್ ರಚನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಸಚಿವರಾಗಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ದೇಶ ಮತ್ತು ವಿದೇಶದ ಐಟಿ ದಿಗ್ಗಜರೊಂದಿಗೆ ಗುರುತಿಸಿಕೊಂಡು ಹೆಚ್ಚು ಜನಪ್ರಿಯರಾದರು. ಇಂದು ಬೆಂಗಳೂರು ಐಟಿ ಕ್ಷೇತ್ರದಲ್ಲಿ ವಿಶ್ವದಲ್ಲಿ ಜನಪ್ರೀಯಗೊಳ್ಳಲು ಇವರೇ ಪ್ರಮುಖರು. ಇವರ ಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡ ಕೃಷ್ಣ ಅವರು ಬೆಂಗಳೂರನ್ನು ಜಗತ್ತಪ್ರಸಿದ್ದಗೊಳಿಸಿದರು.
2004ರಲ್ಲಿ ಇನಾಮದಾರ ಅವರಿಂದ ದೂರವಾದ ಸುರೇಶ ಮಾರಿಹಾಳ ಅವರು, ಬಿಜೆಪಿ ಸೇರಿದರು. ಆಗ ಮತ್ತು 2008ರಲ್ಲೂ ಮಾರಿಹಾಳ ವಿರುದ್ಧ ಸ್ಪರ್ಧಿಸಿ ಸೋತರು. ಆದರೆ 2013ರಲ್ಲಿ ವಿಜಯಿಯಾಗುವದರ ಮೂಲಕ ಮತ್ತೆ ವಿಧಾನ ಸಭೆ ಪ್ರವೇಶಿಸಿದರು. 2018ರಲ್ಲಿ ಮಹಾಂತೇಶ ದೊಡ್ಡಗೌಡರ ವಿರುದ್ಧ ಸ್ಪರ್ಧಿಸಿ ಸೋತರು. ಆಗ ಕಾಂಗ್ರಸನಲ್ಲಿ ತೀವ್ರವಾದ ಭಿನ್ನಮತಕ್ಕೆ ಬಿಲಿಯಾಗಿ, ಸೋಲನ್ನು ಅನುಭವಿಸಿದರು.
2023ರ ಚುನಾವಣೆಯಲ್ಲಿ ಮತ್ತೆ ಆರಿಸಿ ಬರ್ತೇನಿ ಎಂಬ ಭರವಸೆಯನ್ನು ಹೊಂದಿದ್ದರು, ಆದರೆ…….