ಬೆಳಗಾವಿ : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವಾಯ್ ಎಸ್ಪಿ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 35 ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ನಗರದ ಮಾರ್ಕೆಟ್ ಡಿವಾಯ ಎಸ್ಪಿ ನಾರಯಣ ಭರಮನಿ ಅವರಿಗೆ ಬಡ್ತಿ ನೀಡಿ ಧಾರವಾಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿಯ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿರುವ ನಗರದ ಮಾರ್ಕೆಟ್ ಡಿವೈಎಸ್ ಪಿ ನಾರಾಯಣ ಬರಮನಿ ಅವರನ್ನು ಧಾರವಾಡ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ, ಬೆಳಗಾವಿ ಉತ್ತರ ವಲಯ ಐಜಿಪಿ ಕಚೇರಿಯ ಡಿವೈ ಎಸ್ ಪಿ ಮಹಾಂತೇಶ್ವರ ಜಿದ್ದಿ ಅವರನ್ನು ಬಾಗಲಕೋಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಮತ್ತು ರಾಮದುರ್ಗ ಉಪವಿಭಾಗ ಡಿವೈಎಸ್ ಪಿ ರಾಮನಗೌಡ ಹಟ್ಟಿ ಅವರನ್ನು ವಿಜಯಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ