ಬೆಳಗಾವಿ: ನಿನ್ನೆ ದಿನ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಖುರೇಷಿ ಮಾವನ ಮನೆ ಇದು. ಅಲ್ಲಿ ಆರ್‌ಎಸ್‌ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ ಅಂತಾ. ಅವರ ಕುಟುಂಬ ಬೇರೆ ಕಡೆ ಶಿಪ್ಟ್ ಆಗಿದ್ದಾರೆ. ಎಕ್ಸ್ ಖಾತೆಯಲ್ಲಿ ಅನಿಸ್ ಉದ್ದೀನ್ ಹಂಚಿಕೊಂಡಿದ್ದ.
ಕೂಡಲೇ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಅಂತಾ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಹೇಳಿದರು.
ಕೂಡಲೇ ಆ ಪೋಸ್ಟ್ ನ ವ್ಯಕ್ತಿ ಡಿಲಿಟ್ ಮಾಡಿದ್ದಾನೆ.
ಕೂಡಲೇ ನಮ್ಮ ಪೊಲೀಸರನ್ನ ಅವರ ಮನೆಗೆ ಕಳುಹಿಸಿ.
ಕುಟುಂಬಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಿದ್ದೇವೆ.
ಈ ವ್ಯಕ್ತಿ ಕೆನಡಾದಲ್ಲಿ ಇರುವುದು ಎಂಬುದು ಗೊತ್ತಾಗಿದೆ.
ತನಿಖೆ ನಡೆಯುತ್ತಿದೆ ಆತ ಭಾರತೀಯ ಮೂಲದವನಾಗಿದ್ದರೆ.
ಕೂಡಲೇ ಆತನ ವಿರುದ್ಧ ಎಫ್‌ಐಆರ್ ಮಾಡುತ್ತೇವೆ.
ಆತ ವಿದೇಶದವನಾಗಿದ್ದರಿಂದ ಈ ವರೆಗೂ ಎಫ್‌ಐಆರ್ ದಾಖಲು ಮಾಡಿಲ್ಲ ಎಂದರು.
ಸದ್ಯ ಆ ಕುಟುಂಬಕ್ಕೆ ಸುಳ್ಳು ಸುದ್ದಿ ಹರಡಿದೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ರೀತಿಯ ಕ್ರಮಗಳನ್ನ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ.
ಸಾಮಾಜಿಕ ಮಾಧ್ಯಮಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ. ಯಾರಾದರೂ ಕಿಡಗೇಡಿಗಳು ಸುಳ್ಳು ಸುದ್ದಿ ಹರಡಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸುಳ್ಳಸುದ್ದಿ ಹಬ್ಬಿಸುವವರ ವಿರುದ್ದ ಶೀಘ್ರ ಎಫ್‌ಐಆರ್ ದಾಖಲು :ಎಸ್ ಪಿ
