ಬೆಳಗಾವಿ: ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯಲ್ಲಿನ ಕುರಾನ್ ಸುಟ್ಟು ಜಾಡು ಹಿಡಿದು ಹೊರಟ್ಟಿದ್ದ ಪೊಲೀಸರಿಗೆ ಇದೇ ಗ್ರಾಮದ ಮಸೀದಿ ಗೋಪುರ ಕಡೆವಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ಗುರುವಾರ ರಾತ್ರಿ ಬೆಳಗಾವಿಯಲ್ಲಿ ಕರೆಯಲಾದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತನಿಖೆ ವೇಳೆ ಹಳೆ ಘಟನೆ ಬಗ್ಗೆ ಮಾಹಿತಿ ಬಂದಿದೆ. ಈ ಹಿಂದೆ ಈದ್ಗಾ ಗೋಪುರ ಕೆಡವಿದ ಆರೋಪಿಗಳು ಸಿಕ್ಕಿದ್ದಾರೆ.ಈ ಪ್ರಕರಣದಲ್ಲಿ ನಾಲ್ಕು ಆರೋಪಿಗಳು ಬಂಧಿಸಲಾಗಿದೆ ಎಂದರು.
ಈ ಘಟನೆಯೂ ಏಪ್ರಿಲ್ ನಲ್ಲಿ ಆಗಿದ್ದ ಘಟನೆಯಲ್ಲಿ ನಾಲ್ಕು ಜನ ಬಂಧನವಾಗಿದೆ. ಆರೋಪಿಗಳಾದ ಲಕ್ಷ್ಮಣ್ ಉಚವಾಡೆ, ಮುತ್ತಪ್ಪ ಉಚವಾಡೆ, ಲಕ್ಷ್ಮಣ್ ನಾಯಕ್, ಶಿವರಾಜ್ ಗುದ್ಲಿ ಬಂಧಿತರು.ಮುಸ್ಲಿಂ ಯುವಕನ ಜೊತೆಗೆ ಹಿಂದೂ ಯುವತಿ ಓಡಿ ಹೋಗಿದ್ದಳು. ಈ ವಿಚಾರಕ್ಕೆ ಕೆಲವರು ಈದ್ಗಾ ಗೋಪುರ ಕೆಡವಿದ್ದರು. ಮೊನ್ನೆ ಕುರಾನ್ ಸುಟ್ಟ ಪ್ರಕರಣದಲ್ಲಿ ಯಾರು ಆರೋಪಿಗಳು ಬಂಧನ ಆಗಿಲ್ಲ. ಸಮಾಜದ ಮುಖಂಡರ ಜೊತೆಗೆ ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಯಾರಿಗೂ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ. ಯಾರಾದರೂ ಪ್ರತಿಭಟನೆ ಮಾಡಿದರೂ, ಶಾಂತಿಯುತ ಪ್ರತಿಭಟನೆ ಮಾಡಲು ಮನವಿ ಮಾಡಿದ್ದೇವೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಮೂರು ಸಾವಿರ ಜನ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆ ಮಾಡಿದ್ದೇವೆ. ಯಾರೂ ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ಅವಕಾಶ ಕೊಡಲ್ಲ. ಯಾರಿಗೂ ಬಂದ್ ಮಾಡಲು ಅವಕಾಶ ನೀಡುವುದಿಲ್ಲ.
ಐದು ತಂಡ ರಚನೆ ಮಾಡಿದ್ದೇವೆ ತನಿಖೆ ನಡೆಯುತ್ತಿದೆ.ಪ್ರತಿಭಟನೆ ಮಾಡದಂತೆ ಮುಖಂಡರ ಜೊತೆಗೆ ನಾವು ಮನವಿ ಮಾಡಿದ್ದೇವೆ ಎಂದರು.