ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಸ್ವಗ್ರಾಮ ನೇಗಿನಹಾಳ ಗ್ರಾಮಕ್ಕೆ ಬೆಳಗ್ಗೆ 5 ಗಂಟೆಗೆ ತೆಗೆದುಕೊಂಡು ಬಂದು, ಮನೆಯಲ್ಲಿ ಪೂಜಾ ವೀಧಾನಗಳನ್ನು ಪೊರೈಸಿ, 8 ಗಂಟೆಗೆ ಮನೆಯಿಂದ ಹೊರಟು ಅವರೇ ಸ್ಥಾಪಿಸಿದ ವಿಜಯ ಶ್ರೀ ವಿದ್ಯಾದಾಯಿನಿ ಸಂಘದ ಹೈಸ್ಕೂಲ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಮೆರವಣಿಗೆ ಮೂಲಕ ಸಂಚರಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮನಮನ ಸಲ್ಲಿಸಿ, ಲಿಂಗಾಯತ ಧರ್ಮದ ಪ್ರಕಾರ ಅವರ ತಾಯಿ ಸಮಾಧಿ ಪಕ್ಕದಲ್ಲಿಯೇ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರು ಪಂಚಭೂತಗಳಲ್ಲಿ ಲೀನವಾದರು.
ಮಾಜಿ ಸಚಿವರಾದ ಡಿ ಬಿ ಇನಾಮದಾರ ಅವರ ಪಾರ್ಥೀವ ಶರೀರದ ಮೇಲೆ ಉಪವಿಭಾಗಧಿಕಾರಿ ಪ್ರಭಾವತಿ ಫಕೀರಪುರ, ಡಿವಾಯ ಎಸ್ಪಿ ರವಿ ನಾಯಕ ಅವರು ರಾಷ್ಟ್ರಧ್ವಜವನ್ನು ಹೊದಿಸಿ ಅಂತಿಮ ನಮನ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರದ್ದಾಂಜಲಿ ಅರ್ಪಿಸಿ, ನನಗಿಂತ ವಯಸ್ಸಿನಲ್ಲಿ ಕಿರಿಯರು, ಅತ್ಯಂತ ಉತ್ಸಾಯಿ ಹಾಗೂ ಚಟುವಟಿಕೆಯಿಂದ ಇರುವಂತ ವ್ಯಕ್ತಿ ಅಚಾನಕ್ಕಾಗಿ ಅನಾರೋಗ್ಯಕ್ಕೆ ತುತ್ತಾಗಿರುವದು ನನಗೂ ಶಾಕ್ ಆಗಿದೆ. ಕಿತ್ತೂರಿನ ಧಣಿ ಎಂದೇ ಗುರುತಿಸಿಕೊಂಡಿದ್ದ ಅವರು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ವ್ಯಕ್ತಿಯಾಗಿದ್ದರು. ಅವರ ಸಾವು ನನಗೆ ಧಿಗ್ರಭಮೆಯನ್ನುಂಟು ಮಾಡಿದೆ. ಪ್ರತಿದಿನ ಮಣಿಪಾಲ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡಿ ಅವರಿಗೇ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದಿದ್ದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಮಾಜಿ ಸಚಿವ ಎಂ ಬಿ ಪಾಟೀಲ ಅವರು ಭಾವುಕರಾಗಿ ಅಂತಿಮ ನಮನ ಸಲ್ಲಿಸುತ್ತ, ಕಿರಿಯ ವಯಸ್ಸಿನಲ್ಲಿ ಶಾಸಕರಾಗಿ ತತ್ಬ ಸಿದ್ದಾಂತದಿಂದ ಇದ್ದವರು. ಅತ್ಯಂತ ಶ್ರೀಮಂತ ವ್ಯಕ್ತಿ. ಶ್ರೀಮಂತ ರಿದ್ದರೂ ಕೂಡ ಜನರಿಗೆ ಹತ್ತಿರವಾಗಿದ್ದು ಗೌರವ ನೀಡುತ್ತಿದ್ದರು. ಐಟಿ ಬಿಟಿ ಸಚಿವರಾಗಿದ್ದ ಸಂದೃಭದಲ್ಲಿ ಅವರ ಸೇವೆ, ಬುದ್ದಿಮತ್ತೆ ಉಪಯೋಗಿಸಿದಾಗ ನಾರಾಯಣಮೂರ್ತಿ ಅವರು ಸಾಥ ಸಾಥ ನೀಡಿದರು. ಸಂಬಂದಿಯಾದ ನಾನೂ ಕೂಡ ಅವರ ಮಾರ್ಗದರ್ಶನ ಪಡೆಯುತ್ಯಿದ್ದೆ. ಬೆಳಗಾವಿ ಜಿಲ್ಲೆಯ ವಿಶಿಷ್ಟ ರಾಜಕಾರಣಿ. ಸ್ನೇಹಜೀವ ಸರಳ ಸಜ್ಜನಿಕೆಯ ರಾಜಕಾರಣಿಯನ್ನು ಕಳೆದುಕೊಂಡಿದ್ದು ತೀವ್ರ ಬೇಸರವೆನಿಸಿದೆ.
ಶಾಸಕರಾದ ಮಹಾಂತೇಶ ದೊಡ್ಡಗೌಡರ – ಬಹಳ ಮುತ್ಸದ್ದಿ ರಾಜಕಾರಣಿ, ತಂದೆಯವರೊಂದಿಗೆ ಒಡನಾಟ ಹೊಂದಿದ್ದ ಇನಾಮದಾರ ಅವರು ಪ್ರಮಾಣಿಕ ಧಣಿಗಳು. ನಾನೂ ಕೂಡ ಹೆಚ್ಚಿನ ಒಡನಾಟದಲ್ಲಿದ್ದೆ. ಕುಟುಂಬ ಬೆಳೆಸದೆ ಸಮಾಜವನ್ನು ಬೆಳೆಸಿದವರು. ಅತ್ಯಂತ ಸಂಸ್ಕಾರಯುತ ಜೀವನ ಅವರದ್ದು. ಆ ಕುಟುಂಬದ ಜೊತೆಗೆ ನಾವೆಲ್ಲರೂ ನಿಲ್ಲೋಣ. ರಾಜಕೀಯವಾಗಿಯೂ ಅವರಿಗೆ ಸಹಕಾರ ನೀಡುತ್ತೇನೆ ಎಂದರು.
ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ , ಶಾಸಕರಾದ ಹೆಚ್ ಕೆ ಪಾಟೀಲ, ಮಹಾಂತೇಶ ಕೌಜಲಗಿ, ಡಾ. ಅಂಜಲಿ ನಿಂಬಾಳಕರ, ಅಶೊಕ ಪಟ್ಟಣ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂದೀಪ ಪಾಟೀಲ ಸೇರಿದಂತೆ ಅನೇಕ ಮುಖಂಡರು,ಅಧಿಕಾರಿಗಳು ಸಾವಿರಾರು ಅನುಯಾಯಿಗಳು ಅಂತಿಮ ನಮನ ಸಲ್ಲಿಸಿದರು.
ಪೋಲೀಸರು ವಾದ್ಯಗಳ ಮೂಲಕ ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಲಿಂಗಾಯತ ಧರ್ಮದ ಪ್ರಕಾರ ಅಂತ್ಯಕ್ರಿಯೆ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಅವರ ತಾಯಿಯ ಪಕ್ಕದಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲಾಯಿತು. ರಾಜ್ಯದ ವಿವಧ ಮಠಾದೀಶರು ಆಶೀರ್ವದಿಸಿದರು. ನೇಗಿನಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ತಲುಪಲಾಯಿತು. ಈ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳಾದ ವಿಕ್ರಮ ಇನಾಮದಾರ ಬಸನಗೌಡ, ಬಿನಿತಾ, ಸೊಸೆ ಲಕ್ಷ್ಮಿ, ಅಳಿಯ ವಿಜಯ, ಮಾವ ಸೋಮನಾಥ ಸೇರಿದಂತೆ ಜನೋಸ್ತಮವೇ ಸೇರಿತ್ತು.