ದೇಶದ ನಗರ ಪಾಲಿಕೆಗಳ ವಾರ್ಡ್ ಗಳನ್ನು ಆಕರ್ಷಣೀಯವಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ನಗರ ಸುಂದರ ಸ್ಪರ್ಧೆ ಆಯೋಜಿಸಿದೆ. ನಗರ, ವಾರ್ಡ್ ಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿನ ಸಂಪರ್ಕ ಸೌಕರ್ಯ, ಸೌಲಭ್ಯಗಳ ಲಭ್ಯತೆ, ಚಟುವಟಿಕೆ, ಪರಿಸರ ಮತ್ತು ಸೌಂದರ್ಯದ ಆಧಾರದಲ್ಲಿ ನಗರಗಳಿಗೆ ಅಂಕ ನೀಡಲಾಗುತ್ತಿದೆ. ಈ ಕುರಿತು ಸಚಿವಾಲಯ ಗುರುವಾರ ಪ್ರಕಟಣೆ ಹೊರಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ನಗರಗಳ ಹೆಸರು ನೋಂದಣಿಗೆ ಜುಲೈ ೧೫ ಅಂತಿಮ ದಿನವಾಗಿದೆ.