ಸಂಘರ್ಷ ಪೀಡಿತ ಸುಡಾನ್‌ನಿಂದ ಆಪರೇಷನ್‌ ಕಾವೇರಿ ಹೆಸರಿನಡಿ 128 ಭಾರತೀಯರಿದ್ದ ನಾಲ್ಕನೇ ವಿಮಾನ ಸೌದಿ ಅರೇಬಿಯಾದ ಜಿದ್ದಾಗೆ ತಲುಪಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಮುರಳೀಧರನ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ.
ಭಾರತೀಯ ವಾಯು ಪಡೆ IAF C-130J ವಿಮಾನದಲ್ಲಿ ಪೋರ್ಟ್‌ ಸುಡಾನ್‌ನಿಂದ ಇವರನ್ನು ಜಿದ್ದಾಗೆ ಕರೆತರಲಾಯ್ತು. ಜಿದ್ದಾಗೆ ತಲುಪಿರುವ ಭಾರತೀರಯನ್ನು ದೇಶಕ್ಕೆ ಕಳಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ಮುರಳೀಧರನ್‌ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
ಜಿದ್ದಾ ತಲುಪಿದ ನಂತರ ಅಲ್ಲಿಂದ ಎಲ್ಲರನ್ನೂ ಸ್ವದೇಶಕ್ಕೆ ಕರೆತರಲಾಗುತ್ತದೆ.