ಪದೇ ಪದೇ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯು ತಪಾಸಣೆಗಾಗಿ ಆಸ್ಪತ್ರೆಗೆ ಬಂದಾಗ ಆತ ಅನಿಯಂತ್ರಿ ಮಧುಮೇಹ ಹಾಗೂ ರಕ್ತದೊತ್ತಡ ಹಾಗೂ ಕಿಬ್ಬೊಟ್ಟೆಯಲ್ಲಿ ಭಾವು ಇರುವದು ಕಂಡುಬಂದಿತು. ಸೋನೋಗ್ರಾಫಿ ಮಾಡಿ ನೋಡಿದಾಗ ಹಲವು ಹರಳುಗಳ ಕಂಡುಬಂದವು. ತಡಮಾಡದ ವೈದ್ಯರು ಲೇಸರ ಶಸ್ತ್ರಚಿಕಿತ್ಸೆ ನೆರವೇರಿಸದರೆ ಅಚ್ಚರಿ ಕಾದಿತ್ತು. ಆತನ ಕಿಡ್ನಿಯಿಂದ ಒಂದಲ್ಲ ಎರಡಲ್ಲ ನೂರಕ್ಕೂ ಅಧಿಕ ಹರಳುಗಳನ್ನು ಹೊರತೆಗೆಯುವಲ್ಲಿ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಚಾರಿಟೇಬಲ ಆಸ್ಪತ್ರೆ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
60 ವರ್ಷದ ವ್ಯಕ್ತಿಯು ಕಳೆದ ಕಳೆದ 3 ವರ್ಷಗಳಿಂದ ಕಿಡ್ನಿ ಸಮಸ್ಯೆ, ಅನಿಯಂತ್ರಿತ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಈತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವದು ಅತ್ಯಂತ ಸವಾಲಿನ ಹಾಗೂ ಕಠೀಣತೆಯಿಂದ ಕೂಡಿತ್ತು. ಸವಾಲಾಗಿ ಸ್ವೀಕರಿಸಿದ ಮೂತ್ರಪಿಂಡ ತಜ್ಞವೈದ್ಯರಾದ ಡಾ. ಅಮೇಯ ಪಥಾಡೆ ಅವರು ರೋಗಿಗೆ ಧೈರ್ಯ ತುಂಬಿ ಆತನನ್ನು ಶಸ್ತ್ರಚಿಕಿತ್ಸೆಗೆ ಮಾನಸಿಕವಾಗಿ ಸನ್ನಧ್ದಗೊಳಿಸಿದರು.
ನಿರಂತರ 2 ಘಂಟೆಗಳ ಕಾಲ ನಡೆದ ಲೇಸರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಅಮೇಯ ಪಥಾಡೆ ಹಾಗೂ ಅವರ ತಂಡವು ನೂರಾರು ಹರಳುಗಳನ್ನು ತೆಗೆಯುವಲ್ಲಿ ಯಶಸ್ವಿಯಾದರು. ಡಾ. ಮಂಜಿತ, ಡಾ. ಈಶ್ವರ ಮತ್ತು ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಜಿ ನೆಲವಿಗಿ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಮೇಯ ಪಥಾಡೆ ಅವರು ಮೂತ್ರಪಿಂಡದಲ್ಲಿ ಹರಳುಗಳುಗಳಾಗುವದು ಇಂದಿನ ದಿನಗಳಲ್ಲಿ ಸಹಜವಾಗಿದೆ. ಇದಕ್ಕೆ ಕಾರಣ ನಾವು ದಿನನಿತ್ಯ ಸೇವಿಸುವ ಆಹಾರವಾಗಿದೆ. ನಾವು ಸೇವಿಸಿದಷ್ಟು ಆಹಾರಕ್ಕೆ ತಕ್ಕಂತೆ ನಮ್ಮ ಶರೀರಕ್ಕೆ ವ್ಯಾಯಾಮ ಹಾಗೂ ಸಮರ್ಪಕವಾದ ನೀರಿನ ಸೇವನೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಕ್ಯಾಲ್ಸಿಯಂ ಮತ್ತಿತರೆ ಪೌಷ್ಟಿಕಾಂಶಗಳು ಶರೀರಕ್ಕೆ ಶಕ್ತಿಯಾಗಿ ಪರಿಣಮಿಸುತ್ತವೆ. ಆದರೆ ವ್ಯಾಯಾಮ ಮತ್ತು ನೀರಿನ ಸೇವನೆ ಕಡೆಗಣಿಸಿದರೆ ಶರೀರದಲ್ಲಿನ ಕ್ಯಾಲ್ಸಿಯಂ ಹರಳಿನ ರೂಪಕ್ಕೆ ತಿರುಗಿ ಮೂತ್ರಪಿಂಡದ ಸಮಸ್ಯೆಗಳು ತಲೆದೋರಬಹುದಾಗಿದೆ ಎಂದು ಎಚ್ಚರಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದ್ಸಯರು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ, ಯುಎಸ್‌ಎಮ್ ಕೆ ಎಲ್ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಅಭಿನಂದಿಸಿದ್ದಾರೆ.