ಬೆಳಗಾವಿ: ದಂಪತಿಗಳಿಗೆ ಮಕ್ಕಳಾಗದಿದ್ದಾಗ ದತ್ತು ಪಡೆಯುವ ಪ್ರಕ್ರಿಯೆ ಸರ್ವೇ ಸಾಮಾನ್ಯ. ಆದರೆ, ಇಟಲಿಯ ದಂಪತಿಯೊಬ್ಬರೂ ವಿಕಲಚೇತನ ಮಗುವನ್ನು ದತ್ತು ಪಡೆದಿದ್ದಾರೆ.
ಮದುವೆಯಾಗಿ ಎಂಟರಿಂದ ಒಂಬತ್ತು ವರ್ಷಗಳು ಕಳೆದರೂ ಕೂಡ ಈ ದಂಪತಿಗಳಿಗೆ ಸಂತಾನ ಭಾಗ್ಯವಿರಲಿಲ್ಲ. ಆದರೆ, ಸರಕಾರಿ ಹುದ್ದೆಯಲ್ಲಿದ್ದರೂ,
ಪತಿಗೆ ನಡೆದಾಡದ ಸ್ಥಿತಿ. ಆತನ ಪತ್ನಿ ಫಿಜಿಯೋ ಥೆರಪಿಸ್ಟ್.
ಹೀಗೆ ಆರೋಗ್ಯದಲ್ಲಿ ಸಮಸ್ಯೆ ಇರುವುದರಿಂದ ಅಂತರಾ ಷ್ಟ್ರೀಯ ದತ್ತು ಪ್ರಕ್ರಿಯೆ ಮುಂದಾಗಿ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಕೇಂದ್ರವನ್ನು ಇಟಲಿಯಿಂದ ಸಂಪರ್ಕಿಸಿ, ವಿಶೇಷಚೇತನ ಮಗುವನ್ನು ಅವರು ಕಾನೂನಾತ್ಮಕವಾಗಿ ದತ್ತು ಪಡೆಯುವ ಮೂಲಕ
ಇತರರಿಗೆ ಪ್ರೇರಣೆಯಾಗಿದ್ದಾರೆ.
ತಂದೆ-ತಾಯಿಗೆ ಮಕ್ಕಳು ಸುಂದರವಾಗಿ ಇರಬೇಕೆಂದು ಬಯಸುತ್ತಾರೆ. ಆದರೆ, ಇಟಲಿಯ ಫ್ಲೋರೆನ್ಸನ ಕೋಸ್ಟಾಂಜಾ ಮತ್ತು ಬುಜರ್ ಡೆಡೆ ದಂಪತಿಗಳು ಇದ್ಯಾವುದನ್ನು ಲೆಕ್ಕಿಸದೆ ವಿಕಲ ಚೇತನ ಮಗು ಬೇಕು ಎಂದು ಬಯಸಿ ಮಗುವಿನ ಬದುಕಿಗೆ ಆಸರೆಯಾಗಿದ್ದಾರೆ.
ಭಾರತದ ಕಾನೂನಿನ ಪ್ರಕಾರ ಮಗುವನ್ನು ದತ್ತು ಪಡೆಯಲಾಗಿದೆ. ಇಲ್ಲಿಯ ಜನರು ಭಾರತ ದೇಶವನ್ನು ಗೌರವಿಸುವರು.ಅದರಂತೆ ಈ ವಿಶೇಷ ಚೇತನ ಮಗುವಿನ ಭವಿಷ್ಯವನ್ನು ಉಜ್ವಲ ಗೊಳಿಸಲಾಗುವುದು ಎಂದು ಕೋಸ್ಟಾಂಜಾ ಮತ್ತು ಬುಜರ್ ಡೆಡೆ ದಂಪತಿಗಳು ಹೇಳಿದರು.
ಇನ್ನು ದತ್ತು ಪ್ರಕ್ರಿಯೆಗೆ ಭಾರತ ಮತ್ತು ಇಟಲಿಯ ಸಂಪರ್ಕದ ಕೊಂಡಿಯಾದ ಹಸಮುಖ ಠಕ್ಕರ್ ಅವರು ಇಟಲಿಯ ಈ ದಂಪತಿಗಳು ಭಾರತದ ಮಗುವನ್ನು ದತ್ತು ಪಡೆದು ಅತ್ಯಂತ ಚೆನ್ನಾಗಿ ಪೋಷಣೆ ಮಾಡುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿ 2. ತಿಂಗಳಿಗೊಮ್ಮೆ ಮಗುವಿಗೆ ಸಂಬಂಧಿಸಿದಂತಹ ವರದಿಯನ್ನು ಅವರು ನೀಡಲಿದ್ದಾರೆ. ಕಾನೂನಾತ್ಮಕವಾಗಿ ದಾಖಲೆಗಳ ಮೂಲಕ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಆಶ್ರಮದ ನಿರ್ದೇಶಕರಾದ ಡಾ. ಮನಿಷಾ ಭಾಂಡನಕರ ಅವರು ಉಪಸ್ಥಿತರಿದ್ದರು.
ಇಟಲಿಯ ದಂಪತಿಗಳ ಮಡಿಲಲ್ಲಿ ಅನಾಥ ಮಗು
