ಬೆಳಗಾವಿ : ಮದುವೆ ಸಮಾರಂಭದ ಫೋಟೋ ತೆಗೆಯಲು ಆಗಮಿಸಿದ್ದ ಫೋಟೋಗ್ರಾಫರನನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೈಲಹೊಂಗಲದ ಉಮೇಶ ಹಲ್ಲೆಗೊಳಗಾದ ಫೋಟೋಗ್ರಾಫರ್. ನಾಲ್ಕು ದಿನಗಳ ಹಿಂದೆ ಬೆಳಗಾವಿ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಫೋಟೊ ತೆಗೆಯಲು ಬಂದಿದ್ದಾರೆ. ಆಗ ನಾಲ್ವರು ಉಮೇಶ ನನ್ನು ಅಪಹರಿಸಿ ಕಾರಲ್ಲಿ ಕರೆದೊಯ್ದಿದ್ದರು.
ರಾಡ್ ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ನಂತರ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ಕಾರಿನಿಂದ ಕೆಳಗಿಳಿಸಿ ಹೋಗಿದ್ದರು.
ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ.