ದೆಹಲಿ : ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿ  ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರಿಗೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರಿಂದಿಲ್ಲಿ ದೆಹಲಿಯಲ್ಲಿ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯವು ಅನೇಕ ಪರಿಸರ ವೈವಿದ್ಯತೆಯನ್ನು ಒಳಗೊಂಡಿದ್ದು, ಗಾತ್ರದಲ್ಲಿಯೂ ಹಿರಿದಾಗಿರುವ ಕಾರಣ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ ಅವಶ್ಯಕತೆವಾಗಿದೆ. ಕರ್ನಾಟಕದಲ್ಲಿ ಎಲ್ಲಿಯೂ ಕೂಡ ಡಾಪ್ಲರ್ ವೆದರ್ ರಾಡಾರ್ ಕೇಂದ್ರವಿಲ್ಲ. ಆದ್ದರಿಂದ  ತಜ್ಞರ ಸಲಹೆ ಆಧರಿಸಿ ಬೆಳಗಾವಿ, ಕುಂದಾಪುರ, ರಾಯಚೂರು ಹಾಗೂ ಬೆಂಗಳೂರಿನಲ್ಲಿ ಆಯಕಟ್ಟಿನ ಸ್ಥಳಗಳನ್ನು ಪರಿಗಣಿಸಲು ಯೋಗ್ಯವಾಗಿವೆ. ಆದರೆ ಬೆಳಗಾವಿ ಮೂರು ರಾಜ್ಯಗಳ ಗಡಿ ಪ್ರದೇಶದಲ್ಲಿ ಇರುವದರಿಂದ ಅತಿ ಹೆಚ್ಚು ಸೂಕ್ತವಾದ ಸ್ಥಾನ ಬೆಳಗಾವಿಯಾಗಿದ್ದು, ಇಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.

ಜಾಗತಿಕ ಹವಾಮಾನ ವೈಪರಿತ್ಯಗಳನ್ನು ತಿಳಿಯಲು ಅತಯಾಧುನಿಕ ಹವಾಮಾನ ವ್ಯವಸ್ಥೆಗಳೊಂದಿಗೆ, ಅದರ ನಿಖರತೆ ಮತ್ತು ಮುನ್ಸೂಚನೆ ಅತೀ ಮುಖ್ಯವಾಗಿದೆ. ಡಾಪ್ಲರ್ ರಾಡಾರ್ ವ್ಯವಸ್ಥೆಯು  50-100 ಕಿಮೀ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಎಂದು ಹೆಸರು ಮಾಡಿದೆ. ವಿವಿಧ ತರಂಗ ಬ್ಯಾಂಡ್‌ಗಳನ್ನು ಬಳಸುವದರಿಂದ ಮಳೆ, ಗಾಳಿಯ ತೀವ್ರತೆ, ಗಾಳಿಯ ದಿಕ್ಕು ಮತ್ತು ಚಂಡಮಾರುತದ ಚಲನೆಯಂತಹ ನಿರ್ಣಾಯಕ ಹವಾಮಾನ ನಿಯತಾಂಕಗಳನ್ನು ಒದಗಿಸುತ್ತದೆ. ಇದು ರೈತರಿಗೆ ಸಕಾಲಿಕ ಹವಾಮಾನ ಮಾಹಿತಿಯೊಂದಿಗೆ ಕೃಷಿ ಪದ್ಧತಿಗಳನ್ನೂ ಸಹ ಉತ್ತಮಗೊಳಿಸಲು ಅಗಾಧವಾದ ಅವಕಾಶಗಳನ್ನು ತೆರೆಯುತ್ತದೆ. ಅಲ್ಲದೇ ವಿಪತ್ತು ಸನ್ನದ್ಧತೆ ಮತ್ತು ನಿರ್ವಹಣೆ,  ಜೀವಗಳನ್ನು ಉಳಿಸಲು ಮತ್ತು ನಷ್ಟವನ್ನು ತಗ್ಗಿಸಲು. ಪ್ರತಿಕೂಲ ಹವಾಮಾನ ಘಟನೆಗಳು ತಿಳಿಯಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮನವಿ ಸ್ವೀಕರಿಸಿ ಸಚಿವ ರಿಜಿಜು ಅವರು, ಧನಾತ್ಮಕವಾಗಿ ಪರಿಗಣಿಸಿ, ಡಾಪ್ಲರ್ ರಾಡಾರಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆಯಲ್ಲಿ ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲವಾದ್ದರಿಂದ ವಿಳಂಬವಾಗಿದೆ. ಬೆಳಗಾವಿಗೆ ಮೊದಲ ಆದ್ಯತೆ ನೀಡಲು ಪರಿಶೀಲಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಕಡಾಡಿ ತಿಳಿಸಿದ್ದಾರೆ.