ಬೆಳಗಾವಿ : ಶಿವಂ ಅಸೋಸಿಯೇಟ್ ಪ್ರಕರಣ ಸಿಐಡಿ ಗೆ ಹಸ್ತಾಂತರ ಆಗಲಿದೆ. ಠೇವಣಿದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕಳೆದ ತಿಂಗಳು ಸ್ಕ್ಯಾಮ್ ಸೆಲ್ ಆರಂಭ ಮಾಡಿರುವುದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಹೇಳಿದ್ದಾರೆ.
ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಸಹಕಾರ ಇಲಾಖೆ ಅಧಿಕಾರಿಗಳು ಇದರಲ್ಲಿ ಇರುತ್ತಾರೆ. ಈ ಬಗ್ಗೆ ಗುಪ್ತ ದಳದಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಯಾರಾದರೂ ಕಾಯ್ದೆಯನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಗಮನ ಇಟ್ಟು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ಕಳೆದ ಎರಡು ತಿಂಗಳುಗಳಿಂದ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಣ್ಣಿಟ್ಟಿದ್ದು ತನಿಖೆ ಮಾಡಿದ್ದೇವೆ. ಪೊಲೀಸ್ ಆಯುಕ್ತರು ಈ ಬಗ್ಗೆ ವಿಸ್ತೃತ ವರದಿ ನೀಡಿದ್ದಾರೆ. ಯಾವುದೇ ಪಾಲನೆ ನಿಯಮ ಮಾಡದೆ 35,000 ಜನರಿಂದ ಠೇವಣಿ ಸಂಗ್ರಹವಾಗಿದೆ. ಸಹಕಾರ ಇಲಾಖೆಯ ಅಧಿಕಾರಿಗಳಿಂದ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ. ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ ಎಂದು ಹೇಳಿದರು.
ಶಿವಂ ಅಸೋಸಿಯೇಟ್ಸ್ ಶೇಕಡಾ 36 ರಷ್ಟು ಬಡ್ಡಿ ನೀಡುವ ಜಾಹೀರಾತು ನೀಡಿದ್ದರು. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿದ್ದು ಸಂಪೂರ್ಣ ವರದಿಯನ್ನು ಈಗಾಗಲೇ ನನಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ದಾಖಲೆಗಳು ಪತ್ತೆಯಾಗಿವೆ. ಯಾವುದೇ ಅನುಮತಿ ಇಲ್ಲದೆ ಇರುವುದು ಬಹಿರಂಗವಾಗಿದೆ. 150 ಪುಟಗಳ ವರದಿಯನ್ನು ನನಗೆ ಸಲ್ಲಿಸಿದ್ದಾರೆ. ಇದು ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳನ್ನು ನೋಡಲು ಆಫೀಸರ್ ಎಂದು ನೇಮಕ ಮಾಡಲಾಗಿದೆ. ಇದು ಸಿಐಡಿಗೆ ಹಸ್ತಾಂತರ ಆಗಲಿದೆ. ಜನರು ಠೇವಣಿ ನೀಡುವುದನ್ನು ನಿಲ್ಲಿಸಬೇಕು. ಠೇವಣಿ ಇಡುವ ಮೊದಲು ಆರ್ ಬಿ ಐ ವೆಬ್ ಸೈಟ್ ನಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ತಿಳಿಸಿದರು.