ಬೆಳಗಾವಿ: ತಪ್ಪು ಮಾಹಿತಿ ನೀಡಿ ಸಿಂಗಲ್ ಲೇಔಟ್ ನಿರ್ಮಿಸಿ, ಪಿ.ಐ.ಡಿ ಪರಿವರ್ತಿಸುವವರ ವಿರುದ್ಧ ಮತ್ತು ಮಹಾನಗರ ಪಾಲಿಕೆಯ ಕಡತಗಳನ್ನು ನೀಡುವವ ಮತ್ತು ಪಡೆಯುವವ ಇಬ್ಬರು ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಯಿತು.
ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾ‌ರ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಉಪಮಹಾಪೌರರಾದ ವಾಣಿ ಜೋಷಿ. ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ.ಬಿ., ಉಪಾಯುಕ್ತರು ಮತ್ತು ವರಿಷ್ಠ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಪೆಹಲ್‌’ಗಾಮ್’ನಲ್ಲಿ ಉಗ್ರರ ದಾಳಿಗೆ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಆಡಳಿತ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದಕ್ಕೆ ಹಣಮಂತ ಕೊಂಗಾಲಿ ಅವರು ಪಕ್ಷ-ಪ್ರತಿಪಕ್ಷದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ-ಆಸ್ತಿ ಕರವನ್ನು ನೇರವಾಗಿ ಭರಿಸಿಕೊಳ್ಳಲಾಗುತ್ತಿಲ್ಲ. ಕಡತಗಳು ಸಿಗುತ್ತಿಲ್ಲವೆಂದು ಸಬೂಬು ಹೇಳಲಾಗುತ್ತದೆ. ಅದೇ ಏಜೆಂಟ‌ರ್ ಮುಖಾಂತರ ಹೋದಾಗ ಕರ ಭರಿಸಿಕೊಂಡು ವಾಟ್ಸಪ್ ಕಳುಹಿಸಲಾಗುತ್ತಿದೆ ಎಂದು ಶಾಸಕ ಅಭಯ್ ಪಾಟೀಲ್ ಆರೋಪಿಸಿದರು. ಇದರಿಂದಾಗಿ ಮಹಾನಗರ ಪಾಲಿಕೆಯ ಹೆಸರು ಕೆಡುತ್ತಿದ್ದು, ಕಡತಗಳು ಮಾಯವಾಗುತ್ತಿರುವುದೇಕೆ? ನಿಮಗ್ಯಾರು ಹೇಳುವವರು ಕೇಳುವವರಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರು ಡಿಜಿಟಲ್ ಕಡತಗಳನ್ನು ಸಂಗ್ರಹಿಸಿ, ಕಳೆದು ಹೋಗದಂತೆ ಗಮನಹರಿಸಲಾಗುವುದು. ಡಿಜಿಟಲ್ ಸಂಗ್ರಹದಿಂದ ಕಡತಗಳು ಬಹುಬೇಗನೆ ಲಭ್ಯವಾಗುತ್ತವೆ. ಮಹಾನಗರ ಪಾಲಿಕೆಯ ನೂತನ ಕಾರ್ಯಾಲಯದಲ್ಲಿ ಅಭಿಲೇಖಾಲಯವನ್ನು ನಿರ್ಮಿಸುವುದು. ಅದರಂತೆ ಬೇಜವಾಬ್ದಾರಿಯನ್ನು ವಹಿಸಿದವರ ವಿರುದ ದಾಖಲಿಸಲಾಗುವುದು ಎಂದರು.
ಒತ್ತಡ ಅಥವಾ ಹಣದಾಸೆಗೆ ಕಡತಗಳನ್ನು ಕಳ್ಳತನ ಮಾಡುತ್ತಿರಬಹುದು. ಇದರಿಂದ ಸಮಸ್ಯೆಗಳುಂಟಾಗಿ ನಷ್ಟವುಂಟಾಗುತ್ತಿದೆ. ಸಿಂಗಲ್ ಲೇಔಟ್ ನಿರ್ಮಿಸಿ ಪಿ.ಐ.ಡಿ ಪರಿವರ್ತಿಸಲು ಅರ್ಜಿ ಸಲ್ಲಿಸುವವರ ವಿರುದ್ಧ ವಾರದೊಳಗೆ ಕ್ರಿಮಿನಲ್ ಕೇಸ್ ದಾಖಲಿಸಿ, ಬಂಧಿಸಬೇಕು. ನಂತರ ಈ ಪ್ರಕ್ರಿಯೆಯಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದರು. ಮಹಾನಗರ ಪಾಲಿಕೆಯ ಕಡತಗಳು ಮತ್ತು ಮಹಾನಗರ ಪಾಲಿಕೆಯ ಆಸ್ತಿಗಳ ಪಟ್ಟಿಯನ್ನು ಮಾಡಬೇಕೆಂದರು.
ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ ಮತ್ತು ನಾಮನಿರ್ದೇಶಿತ ಮಹಾನಗರ ಪಾಲಿಕೆಯ ಕಡತಗಳಿಗೆ ಮಹಾನಗರ ಪಾಲಿಕೆ ಆಯುಕ್ತರೇ ಜವಾಬ್ದಾರಿರಾಗಿತ್ತಾರೆ. ಆಧೀನ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಮಾಯವಾದ ಕಡತಗಳನ್ನು ಪಡೆಯಬೇಕೆಂದರು.
ಮಹಾಪೌರ ಮಂಗೇಶ ಪವಾರ್ ಅವರು ಕಡತಗಳನ್ನು ನೀಡುವವ ಮತ್ತು ಪಡೆಯುವವ ಇಬ್ಬರು ಹೊಣೆಗಾರರಾಗಿದ್ದು, ಅವರಿಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದರು.
ಇನ್ನು ವಿರೋಧ ಪಕ್ಷದ ಸದಸ್ಯ ಶಾಹೀದ್ ಖಾನ್ ಪಠಾಣ್ ಅವರು 150 ಕೋಟಿ ಅನುದಾನವನ್ನು ಕೇವಲ ಆಡಳಿತಾರೂಢ ಸದಸ್ಯರೇ ಬಳಸಿಕೊಂಡಿರುವುದಾಗಿ ಆರೋಪಿಸಿದರು. ಇದಕ್ಕೆ ಈ ಬಾರಿ ಅನುದಾನ ಕಡಿಮೆ ಬಂದಿದ್ದು, ಮುಂದಿನ ಬಾರಿ ಎಲ್ಲರಿಗೂ ಮಾಡುವುದಾಗಿ ಭರವಸೆಯನ್ನು ನೀಡಿದರು.
SELL) ಖರೀದಿಸಿ