ಬೆಳಗಾವಿ :ವೇಗಾ ಹೆಲ್ಮೆಟ್’ಗೆ 7 ಕೋಟಿ 8 ಲಕ್ಷ 66 ಸಾವಿರ ರೂ.ಗಳ ಬಾಕಿ ತೆರಿಗೆ ಪಾವತಿಸಿಕೊಳ್ಳಬೇಕು. ಈ ಪ್ರಕರಣವನ್ನು ಲೋಕಾಯುಕ್ತರ ತನಿಖೆಗೆ ವಹಿಸಿ, ಅವ್ಯವಹಾರವನ್ನು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ನಗರಸೇವಕರು ಆಗ್ರಹಿಸಿದರು.
ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಉಪಮಹಾಪೌರರಾದ ವಾಣಿ ಜೋಷಿ. ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ .ಬಿ., ಉಪಾಯುಕ್ತರು ಮತ್ತು ವರಿಷ್ಠ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಹಾಗೂ ನಗರಸೇವಕ ರಮೆಶ್ ಮೈಲ್ಯಾಗೋಳ ಅವರು, ವೇಗಾ ಹೆಲ್ಮೆಟ್ ಬೆಳಗಾವಿಯಲ್ಲಿ ಕಳೆದ 6 ತಿಂಗಳಿನಿಂದ ಹೈಲೈಟ್ ಸುದ್ದಿಯಾಗಿದೆ. 2016 ಕ್ಕಿಂತ ಮೊದಲಿನಿಂದಲೂ ವೇಗಾ ಹೆಲ್ಮೆಟ್’ನವರು ಕೇವಲ 2 ಕೋಟಿ 15 ಲಕ್ಷ ರೂ.ಗಳನ್ನು ಮಾತ್ರ ಮಹಾನಗರ ಪಾಲಿಕೆಗೆ ತೆರಿಗೆಯನ್ನು ಭರಿಸಿದ್ದಾರೆ. ಆದರೇ 4 ಕೋಟಿಗೂ ಅಧಿಕ ತೆರಿಗೆ ಬರಬೇಕಾಗಿದೆ. ಕಳೆದ ಸಭೆಯಲ್ಲಿ ಈ ಅವ್ಯವಹಾರದಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಯುಕ್ತ ರೇಷ್ಮಾ ತಾಳಿಕೋಟೆ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಸಲಾಗಿದ್ದು, ಎಲ್ಲ ದಾಖಲೆಗಳನ್ನು 7 ಕೋಟಿ 8 ಲಕ್ಷ 66 ಸಾವಿರ ರೂಪಾಯಿ ಚಲನ್ ನೀಡಲಾಗಿದೆ ಎಂದರು.
ಪಾಲಿಕೆ ತೆರಿಗೆಯಲ್ಲಿಯೂ ಅಧಿಕಾರಿಗ ಅವ್ಯವಹಾರ: ಲೋಕಾಯುಕ್ತ ತನಿಖೆ
