ಬೆಳಗಾವಿ: ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನು ವಶಪಡಿಸಿಕೊಳ್ಳಲು 20 ವರ್ಷಗಳ ಹಿಂದೆ ಮೃತಪಟ್ಟ ಮಹಿಳೆಯನ್ನು ಜೀವಂತ ಮಾಡಿದ್ದ ದುಷ್ಕರ್ಮಿಗಳು, ನಕಲಿ ಮಹಿಳೆಯಿಂದಲೇ ಸಬ್ ರೆಜಿಸ್ಟರ್ ನಲ್ಲಿ ಜಮೀನು ಮರಾಟ ಮಾಡಿದ್ದಾರೆ. ಜಮೀನು ಖರೀದಿ ಮಾಡಿದ ವ್ಯಕ್ತಿ ಹಾಗೂ ಮಾರಾಟಕ್ಕೆ ಕೈಜೋಡಿಸಿದ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.
ಶಾಂತಾ ನಾರ್ವೇಕರ್, ರಷೀದ್ ತಹಶೀಲ್ದಾರ್ ಹಾಗೂ ಸಾಗರ್ ಜಾಧವ್ ಎಂಬುವವರು ಬಂಧಿತರು.
ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನಿಗೆ ನೇರವಾಗಿ ಮಾಲೀಕರು ಯಾರಿಲ್ಲ ಎಂದು ಗಮಿನಿಸಿದ ತಂಡವು 20 ವರ್ಷಗಳ ಹಿಂದೆ ಮೃತಪಟ್ಟಿದ್ದ ಮಹಿಳೆಯನ್ನು ಮರುಸೃಷ್ಠಿಸಿ, ಜಮೀನು ಬೇರೊಬ್ಬರಿಗೆ ಮಾರಾಟ ಸಹ ಮಾಡಲಾಗಿತ್ತು. ಈ ಸಿನಿಮಿಯ ರೀತಿಯ ಪ್ರಕರಣವನ್ನು ಪೊಲೀಸರು ಬೇಧಿಸಿ ಕೃತ್ಯದಲ್ಲಿ ಪಾಲ್ಗೊಂಡ ನಾಲ್ವರನ್ನು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಬೆಳಗಾವಿ ತಾಲೂಕಿನ ಬಾಚಿ ಗ್ರಾಮದ ಕಮಲಾಬಾಯಿ ಅಸಗಾಂವಕರ್ ಎಂಬುವರಿಗೆ ಸೇರಿದ 8.21 ಎಕರೆ ಜಮೀನು ಇತ್ತು. ಈ ಜಮೀನು ಕಳೆದ 20 ವರ್ಷಗಳಿಂದ ಯಾರ ಹೆಸರಿಗೂ ವರ್ಗಾವಣೆ ಆಗಿರಲಿಲ್ಲ. ಜೊತೆಗೆ ಇದಕ್ಕೆ ಯಾರು ವಾರಸುದಾರರು ಇಲ್ಲ ಎಂಬುದದನ್ನು ಅರಿತ ತಂಡವು ಮೃತ ಕಮಲಾಬಾಯಿ ಅಸಗಾಂವಕರ್ ಮಹಿಳೆಯನ್ನು ಮರು ಸೃಷ್ಠಿ ಮಾಡಿ ಜಮೀನನ್ನು ಸಾಗರ ಹೆಸರಿಗೆ ವರ್ಗಾವಣೆ ಮಾಡಿತ್ತು.
8.21 ಎಕೆರೆ ಜಮೀನಿನ ಒಡೆತಿಯಾಗಿದ್ದ ಕಮಲಾಬಾಯಿ ಅಸಗಾಂವ್ಕರ್ 2001ರ ಜುಲೈ 22ರಂದು ನಿಧನ ಹೊಂದಿದ್ದರು. ಮಹಿಳೆಗೆ 12 ಜನ ಮಕ್ಕಳಿದ್ದು, ಎಲ್ಲ ಆಸ್ತಿ ವಿಜಯಗೆ ಸೇರಬೇಕೆಂದು ವಿಲ್ ಬರೆದಿದ್ದರು. ಆದರೆ ತಾಯಿ ಕಮಲಾಬಾಯಿ ತೀರಿದಹೋದ ಎರಡನೇ ವರ್ಷಕ್ಕೆ ಮಗ ವಿಜಯ ಅಸಗಾಂವ್ಕರ್ ಸಹ ನಿಧನ ಹೊಂದಿದ್ದನು. ತಾಯಿ ಹೆಸರಿನಲ್ಲಿ ಇದ್ದ ಆಸ್ತಿ ಮಗನಿಗೆ ವರ್ಗಾವಣೆ ಆಗಿರಲಿಲ್ಲ. ಕಮಲಾಬಾಯಿ ಹಾಗೂ ಪತಿ ವಿಜಯ ತೀರಿಹೋದ ಬಳಿಕ ಸೊಸೆ ವಿನುತಾ ಮುಂಬೈನಲ್ಲಿ ನೆಲಸಿದ್ದರು. ಕೆಲ ದಿನಗಳ ಹಿಂದೆ ಅತ್ತೆ ಹೆಸರಿನಲ್ಲಿ ಇದ್ದ ಜಮೀನು ಬೇರೆಯವರಿಗೆ ವರ್ಗಾವಣೆ ಆಗಿದೆ ಎನ್ನುವ ಮಾಹಿತಿ ಬರುತ್ತದೆ. ತಕ್ಷಣ ದಾಖಲೆ ತೆಗೆದು ನೋಡಿದಾಗ ಶಾಕ್ ಆಗುತ್ತಾರೆ. ಬಳಿಕ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸತ್ತ ಕಮಲಾಬಾವಿ ಅಸಗಾಂವ್ಕರ್ ಅವರನ್ನು ಮರು ಸೃಷ್ಟಿ ಮಾಡಿ, ಕಡೋಲಿ ಗ್ರಾಮದ ಶಾಂತಾ ನಾರ್ವೇಕರ್ ಅವಳನ್ನೇ ಕಮಲಾಬಾವಿ ಎಂದು ಬಿಂಬಿಸಿದ್ದರು. ನಕಲಿ ಆಧಾರ ಕಾರ್ಡ್, ನಕಲಿ ಸಹಿ ಮಾಡಿಸಿ ಕಮಲಾಬಾಯಿ ಜಮೀನು ವರ್ಗಾವಣೆ ಮಾಡಿದ್ರು. ಜಮೀನನ್ನು ಕಾಂಗ್ರಾಳಿಯ ಸಾಗರ ದತ್ತಾತ್ರೇಯ ಜಾಧವ್ ಹೆಸರಿಗೆ ವರ್ಗಾವಣೆ ಮಾಡಿದ್ರು. ಪ್ರಕರಣ ಸಂಬಂಧ ಭೂಕಬಳಿಕೆಗೆ ಸಹಕರಿಸಿದ ಮುತ್ಯಾನಟ್ಟಿಯ ಸುರೇಶ, ಕಡೋಲಿ ಗ್ರಾಮದ ರಶೀದ್ ತಹಶಿಲ್ದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಮರುಸೃಷ್ಟಿಸಿ ಭೂಕಬಳಿಕೆ
