ಬೆಳಗಾವಿ : ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿ, ಅಧಿಕಾರವನ್ನು ಕೈಗೆತ್ತಿಕೊಳ್ಳಲಿದೆ. ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿಯು ರಾಜ್ಯದಲ್ಲಿ ಕೇವಲ 65 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ಕ್ಷೇತ್ರದಲ್ಲಿ ಅನಾಯಾಸವಾಗಿ ಗೆಲ್ಲುತ್ತೇವೆ ಎಂದು ಅತೀಯಾದ ಆತ್ಮವಿಶ್ವಾದಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ಅವರನ್ನು ನೆಚ್ಚಿಕೊಂಡ ರಾಜ್ಯತಂಡವು ಫಲಿತಾಂಶದ ದಿನ ತಲೆ ಕೆಳಗೆ ಮಾಡಬೇಕಾಯಿತು. ಘಟಾನುಘಟಿ ನಾಯಕರ ಸೋಲು ನುಂಗಲಾರ ತುತ್ತಾಗಿ ಪರಿಣಮಿಸಿದೆ.

ಬಿಜೆಪಿಯ ಭದ್ರಕೋಟೆ ಎಂದೇ ಹೆಸರುವಾಸಿಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಪಡೆಯುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಬಿಜೆಪಿ ಕೇವಲ 7 ಸ್ಥಾನಗಳನ್ನು ಉಳಿಸಿಕೊಳ್ಳುವದರ ಮೂಲಕ ತನ್ನ ಗಟ್ಟಿ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದೆ. ಮಾಜಿಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಹಾಗೂ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬರ್ಥದಲ್ಲಿ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಯಿತು. ಆದರೆ ಬಿಜೆಪಿಯ ಯಾವ ನಾಯಕರೂ ಕೂಡ ಅದರ ಕುರಿತು ತುಟಿ ಪಿಟಿಕ್‌ ಎನ್ನಲಿಲ್ಲ. ಇದು ಕೂಡ ಬಿಜೆಪಿಯ ಹಿನ್ಬೆನಡೆಗೆ ಕಾರಣವಾಗಿರಬಹುದು.ಬಿಜೆಪಿಯಲ್ಲಿ ಸೋಲಿನ ಎಲ್ಲ ಹೊರೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ ಕಟೀಲು ಹೊರುತ್ತೇನೆ ಎಂದು ತಿಳಿಸಿದ್ದಾರೆ.

ಬೆಳಗ್ಗೆಯಿಂದ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಕೊನೆಗೆ 136 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿಟ್ಟುಕೊಂಡಿದೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ಜುಗಲ್ ಬಂದಿಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಅತೀ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ.

ಬಿಜೆಪಿಗೆ ಶಾಪವಾಯಿತೇ ಗುಜರಾತ್ ಮಾದರಿ :ಇನ್ನೂ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡದಿರುವುದೇ ಶಾಪಾವಾಯಿತು ಎಂದು ರಾಜಕೀಯ ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ. ಹೊಸ ಮುಖಗಳನ್ಲನು ಪರಿಚಯಿಸುವದಕ್ಕ್ಷಕಾಗಿ ಹಾಗೂ ವ್ಣಯಕ್ತಿಗತ ಪ್ರತಿಷ್ಠೆಯ ಕಾರಣದಿಂದ ಗೆಲ್ಲುವ ಕ್ಷೇತ್ರಗಳಲ್ಲಿ ಬಾಹುಳ್ಯ ಹೊಂದಿದ ಅಭ್ಯರ್ಥಿಗಳನ್ನು ಕಡೆಗಣಿಸಿದ್ದು ಕೂಡ ಬಿಜೆಪಿಗೆ ಮುಳುವಾಯಿತು. ಅತ್ಯಧಿಕ ಮತಗಳನ್ನು ಪಡೆದ ಲಕ್ಷ್ಮಣ ಸವದಿ ಅವರನ್ನು ಕೊನೆತನಕ ಕಾಯಿಸಿ, ಕೊನೆಗೆ ಅವರಿಗೆ ಟಿಕಟೆ ನೀಡುವಲ್ಲಿ ತೊಂದರೆ ನೀಡಲಾಯಿತು. ಇದರಿಂದ ಅವರು ಜಿದ್ದಿಗೆ ಬಿದ್ದು ಕಾಂಗ್ರೆಸ್‌ ಗೆಲ್ಲಿಸುವಲ್ಲಿ ಸಫಲರಾದರ. ಕೇವಲ ಅವರೊಬ್ಬರೇ ಗೆಲ್ಲಲಿಲ್ಲ, ಅವರೊಂದಿಗೆ ಕಾಗವಾಡ ಹಾಗೂ ಕುಡಚಿ ಕ್ಷೇತ್ರಗಳನ್ನು ಗೆಲ್ಲಿಸಿದರು. ಅದರಂತೆ ಲಿಂಗಾಯತ ಮುಖಂಡರನ್ನು ಕೊನೆಯವರೆಗೆ ನಡೆಸಿಕೊಂಡ ರೀತಿಯಿಂದಲೂ ಕೂಡ ಪಕ್ಷಕ್ಕೆ ಸ್ವಲ್ಪ ಹಾನಿಯಾಯಿತು. ಜಗದೀಶ ಶೆಟ್ಟರ್, ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ ಅವರಂತಹ ಪ್ರಸ್ತುತ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡದಿರುವುದೇ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂಬುವುದು ಜಿಲ್ಲೆಯ ಜನಾಭಿಪ್ರಾಯವಾಗಿದೆ. ಅಲ್ಲದೇ ಬೆಲೆ ಏರಿಕೆಯು ಕೂಡಾ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ