ಬೆಳಗಾವಿ,: ಕಳ್ಳರನ್ನು ಕಂಡ ಮಹಿಳೆಯು ಜನರಿಗೆ ತಿಳಿಸಲು ಹೋದಾಗ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ನಗರಕ್ಕೆ ಹೊಂದಿಕೊಂಡಿರುವ ಶಿಂಧೊಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊಸಗೇರಿ ಗಲ್ಲಿಯ ನಿವಾಸಿ ಭರಮಕ್ಕಾ ಪೂಜಾರಿ ಎಂಬ ಮಹಿಳೆಯು ಮೃತ ದುರ್ದೈವಿ.
ಇಂದು ಬೆಳಗ್ಗೆ ಮಹಿಳೆಯ ಶವ ಹೊರಗೆ ತೆಗೆಯಲಾಗಿದೆ.
ಸೆಪ್ಟೆಂಬರ್ 25 ರ ತಡರಾತ್ರಿ ಕಳ್ಳರ ಗುಂಪೊಂದು ಮಹಿಳೆಯ ಮನೆಗೆ ನುಗ್ಗಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆಯಲು ಪ್ರಯತ್ನಿಸಿ, ಗಾಬರಿಯಿಂದ ಹಿಂಬಾಗಿಲಿನಿಂದ ಹೋಗುವಾಗ ಬಾವಿಯಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ.
ಈ ಕುರಿತು ಮಾರಿಹಾಳ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.