ಬೆಳಗಾವಿ: ಬೆಳಗಾವಿಯ ಸಾಂಬ್ರಾದಲ್ಲಿರುವ 82 ವರ್ಷ ಹಳೆಯ ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದಟ್ಟಣೆ ಆಧರಿಸಿ ಮತ್ತಷ್ಟು ವಿಸ್ತರಿಸಲಾಗುತ್ತಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇನ್ನೂ 56 ಎಕರೆ ಭೂಮಿ ಅವಶ್ಯವಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ಆ ಭಾಗದಲ್ಲಿರುವ 10 ಮನೆಗಳನ್ನೂ ಕೂಡ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಸಾಂಬ್ರಾ ವಿಮಾನ ನಿಲ್ದಾಣವು ಸದ್ಯಕ್ಕೆ 755 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಆದರೆ, ಇನ್ನೂ 56 ಎಕರೆ ಜಮೀನು ಬೇಕಾಗಿರುವುದರಿಂದ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಭೂ ಮಾಲೀಕರಿಗೂ ಶೀಘ್ರವೇ ನೋಟಿಸ್ ನೀಡಲಾಗುತ್ತದೆ. ಕೇವಲ 49 ಎಕರೆ ಜಮೀನು ಅವಶ್ಯವಿದ್ದು, ರಸ್ತೆ ಸಮಸ್ಯೆ ತಪ್ಪಿಸಲು 56 ಎಕರೆ ಬೇಕಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರಾದ ಎಸ್ ತ್ಯಾಗರಾಜನ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನಿಡಿದ್ದಾರೆ.
ಇತ್ತೀಚೆಗೆ ಸಂಸದ ಜಗದೀಶ್ ಶೆಟ್ಟರ್ ಅವರು ಈ ಕುರಿತು ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಸೂಚಸಿದ್ದರು. ಅದಕ್ಕೆ ತಕ್ಕಂತೆ ನಾಲ್ಕು
ಕೆಲ ದಿನಗಳ ಹಿಂದೆ ಶ್ರವಣ ನಾಯಕ್ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಭೂಸ್ವಾಧೀನಕ್ಕೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಲಾಗುವುದು. ಬಳಿಕ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು. ಈ ಪ್ರಕ್ರಿಯೆಯೂ ಸಹ
ವೇಗ ಪಡೆಯಲಿದೆ.
ಈ ಹಿಂದೆ ಡಿಸೆಂಬರ್ 2022 ರಲ್ಲಿ ಮಾಜಿ ಸಂಸದೆ ಮಂಗಳಾ ಅಂಗಡಿ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿಭೂಸ್ವಾಧೀನ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಆದರೆ, ಈ ಪ್ರಕ್ರಿಯೆ ಈಗ ವೇಗ ಪಡೆದುಕೊಂಡಿದೆ.
ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆಗೆ 56 ಎಕರೆ ಭೂಸ್ವಾಧೀನ
