ಬೆಳಗಾವಿ,:ಬೆಳಗಾವಿಯಿಂದ ಸೂರತ್ ಹಾಗೂ ಕಿಶನ್‌ಗಡ್ (ಅಜ್ಮೀರ್) ಗೆ ಸಂಚರಿಸುವ ವಿಮಾನಗಳನ್ನು ಸ್ಟಾರ್ ಏರ್ ಜೂನ್ 14ರಿಂದ ಸ್ಥಗಿತಗೊಳಿಸುವುದಾಗಿ  ಘೋಷಿಸಿದೆ. ಈಗಾಗಲೇ ಈ ಮಾರ್ಗಗಳಿಗೆ ಟಿಕೆಟ್ ಬುಕ್ ಮಾಡಿಕೊಳ್ಳುವದನ್ನು ಏರಲೈನ್ಸ ನಿಲ್ಲಿಸಿದೆ.

ಉಡಾನ ಯೋಜನೆಯಡಿ ಡಿಸೆಂಬರ್ 2020ರಲ್ಲಿ  ಪ್ರಾರಂಭವಾದ  ಸೇವೆಯನ್ನು ಸುಮಾರು ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸಿದೆ. ಪ್ರಯಾಣಿಕರಿಂದ ಒಳ್ಳೆಯ ಸ್ಫಂಧನೆ ಮತ್ತು ಶೇ. 90ರಷ್ಟು ಸೀಟು ಭರ್ತಿಯಾಗುತ್ತಿದ್ದರೂ ಕೂಡ ಈ ನಗರಗಳಿಗೆ ಸೇವೆಯನ್ನು ರದ್ದುಪಡಿಸಿದ ಕಾರಣವನ್ನು ವಿಮಾನಯಾನ ಸಂಸ್ಥೆಯು ತಿಳಿಸಿಲ್ಲ.

ಬೆಳಗಾವಿಯಿಂದ ಗುಜರಾತನಿಂದ ಸೂರತ್ ಮತ್ತು ಅಜ್ಮೀರ್ ಅನ್ನು ಸಂಪರ್ಕಿಸುವ ಏಕೈಕ ವಿಮಾನ ಸೇವೆಯಾಗಿದ್ದ ಈ ಮಾರ್ಗಗಳನ್ನು  ಸ್ಥಗಿತಗೊಳಿಸುವದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ.