ಬೆಳಗಾವಿ: ಬೆಳಗಾವಿಯ ನಾಲ್ವರು ಉದ್ಯಮಿಗಳಿಗೆ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಅವರ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರೈನೆಟ್ ಉದ್ಯಮಿ ಆಗಿರುವ ದೊಡ್ಡಣ್ಣವರ ಕುಟುಂಬದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಗೋವಾ, ಬೆಂಗಳೂರಿನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಐರಾನ್ ಹಾಗೂ ಗ್ರೈನೆಟ್ ದೇಶ- ವಿದೇಶಗಳಿಗೆ ಈ ಉದ್ಯಮಿಗಳು ರಫ್ತು ಮಾಡುತ್ತಾರೆ. ಅಲ್ಲದೇ ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ದೊಡ್ಡಣ್ಣವರ ಕುಟುಂಬ ಹೊಂದಿದೆ.
ಅದೇ ರೀತಿ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಗಣೇಶ ಪುರದಲ್ಲಿರುವ ಅಶೋಕ ಐರಾನ್ ಮಾಲೀಕ ಅಶೋಕ ಹುಂಬರವಾಡಿ ಮನೆ ಮೇಲೂ ದಾಳಿ ಮಾಡಲಾಗಿದೆ. ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.