ಬೆಳಗಾವಿ: ಬೆಳಗಾವಿ ನಗರ ಸಾರಿಗೆಯ ಬಸ್ಸನಲ್ಲಿ ಸುಮಾರು 100 ಕ್ಕೂ ಅಧಿಕ ಜನರಿಂದ ತುಂಬಿದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಉಸಿರಾಟದ ತೊಂದರೆಯಾಗಿ ಮೂರ್ಚೆ ಹೋದ ಘಟನೆ ಮಂಗಳವಾರ ನಡೆದಿದೆ.

ಬೆಳಗಾವಿಯ ಸಿಬಿಟಿಯಿಂದ  ಉಚಗಾಂವ್ ಗೆ ಸಂಚರಿಸುವ ಬಸ್ ನಲ್ಲಿ ನಡೆದಿದೆ. ನಗರ ಸಾರಿಗೆ ಬಸ್  ಬೆಳಗಾವಿ ನಗರದ ಚನ್ನಮ್ಮ ವೃತ್ತಕ್ಕೆ ಬರುತ್ತಿದ್ದಂತೆ ವಿದ್ಯರ್ಥಿನಿ ಮೂರ್ಚೆ ಹೋಗಿದ್ದಾಳೆ.

37 ಜನರ ಆಸನ ಹೊಂದಿದ ಬಸನಲ್ಲಿ  ಸುಮಾರು 100ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ನಂತರ ವಿದ್ಯಾರ್ಥಿನಿಯನ್ನು ಕೆಳಗಿಳಿಸಿ  ಪ್ರಥಮ ಚಿಕಿತ್ಸೆ ನೀಡಲಾಯಿತು. ವಿದ್ಯಾರ್ಥಿನಿ ಚೇತರಿಸಿಕೊಂಡ ನಂತರ ಮತ್ತೆ ಬಸ್ ಮುಂದೆ ಚಲಾಯಿಸಿದ ಚಾಲಕ.