ಬೆಳಗಾವಿ,: ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಮೂರು ಲೋಕಸಭಾ ಮತಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.74.87 ರಷ್ಟು ಮತದಾನವಾಗಿರುತ್ತದೆ.

 ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.78.51 ಮತ್ತು ಬೆಳಗಾವಿ ಕ್ಷೇತ್ರದಲ್ಲಿ ಶೇ.71.38ರಷ್ಟು ಮತದಾನವಾಗಿದೆ. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.87 ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.25 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಮತದಾನ‌ ಪ್ರಮಾಣ ಹೆಚ್ಚಳ: ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ‌ 2019 ರಲ್ಲಿ ಶೇ.75.52 ರಷ್ಟು ಮತದಾನವಾಗಿದ್ದರೆ 2024 ರಲ್ಲಿ ಶೇ.78.51 ರಷ್ಟು ಮತದಾನವಾಗುವ ಮೂಲಕ ಪ್ರತಿಶತ 3 ರಷ್ಟು ಹೆಚ್ಚಳವಾಗಿರುತ್ತದೆ.

ಅದೇ ರೀತಿ‌ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019 ರ‌ ಚುನಾವಣೆಯಲ್ಲಿ‌ ಶೇ. 67.70 ರಷ್ಟು‌ ಮತದಾನವಾಗಿತ್ತು. ಈ ಬಾರಿ 2024 ರಲ್ಲಿ ಶೇ.71.38 ರಷ್ಟು ಮತದಾನವಾಗುವ ಮೂಲಕ ಪ್ರತಿಶತ‌ 4 ರಷ್ಟು ಹೆಚ್ಚಳವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದ ಮತದಾನ ವಿವರ:

* ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.ಶೇ.71.38 ರಷ್ಟು ಮತದಾನವಾಗಿರುತ್ತದೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.71.92, ಗೋಕಾಕ‌ ಶೇ.71.06 ಬೆಳಗಾವಿ(ಉತ್ತರ) ಶೇ.63.42 ಬೆಳಗಾವಿ(ದಕ್ಷಿಣ) ಶೇ.67.52 ಬೆಳಗಾವಿ(ಗ್ರಾಮೀಣ) ಶೇ.76.87 ಬೈಲಹೊಂಗಲ ಶೇ.73.5 ಸವದತ್ತಿ-ಯಲ್ಲಮ್ಮ ಶೇ.76.73 ಹಾಗೂ ರಾಮದುರ್ಗ ಶೇ.73.6 ಮತದಾನ ಆಗಿರುತ್ತದೆ.

* ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.78.51 ಮತದಾನವಾಗಿರುತ್ತದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.73, ಚಿಕ್ಕೋಡಿ-ಸದಲಗಾ ಶೇ. 79.58 ಅಥಣಿ ಶೇ.78.66 ಕಾಗವಾಡ ಶೇ.78.84 ಕುಡಚಿ ಶೇ. 74.74 ರಾಯಬಾಗ ಶೇ.75.8 ಹುಕ್ಕೇರಿ ಶೇ.78.35 ಹಾಗೂ ಯಮಕನಮರಡಿ ಶೇ.82.14 ರಷ್ಟು ಮತದಾನ ಆಗಿರುತ್ತದೆ.

ಅಂತಿಮ ವರದಿ‌ ಬಳಿಕ‌ ಮತದಾನದ‌ ಪ್ರಮಾಣದಲ್ಲಿ‌ ಸ್ವಲ್ಪಮಟ್ಟಿಗೆ ಹೆಚ್ಚಳವಾಗಬಹುದು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ‌ 6 ಗಂಟೆಯವರೆಗೆ ಮತದಾನ ನಡೆಯಿತು. ಕೆಲವು ಕಡೆಗಳಲ್ಲಿ 6 ಗಂಟೆಯ‌ ಒಳಗೆ ಮತಗಟ್ಟೆಯ ಸರದಿಯಲಿದ್ದ ಮತದಾರರಿಗೆ ಟೋಕನ್‌ ವಿತರಿಸಿದ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಜಿಲ್ಲೆಯ ಎಲ್ಲ ಕಡೆಗಳಲ್ಲೂ ಮತದಾನ ಶಾಂತಿಯುತವಾಗಿ ನಡೆದಿರುತ್ತದೆ.