ಬೆಳಗಾವಿ: ಬೆಳಗಾವಿಯಿಂದ ಅಯೋಧ್ಯೆಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗಾಗಿ ಭಾರತೀಯ ರೇಲ್ವೆ ಬೆಳಗಾವಿಯಿಂದ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಿದ್ದು, ಇಂದು ಬೆಳಗ್ಗೆ 10.35ಕ್ಕೆ ಪ್ರಥಮ ಸಂಚಾರಕ್ಕೆ ಚಾಲನೆ ನೀಡಲಾಯಿತು.
ವಿಶೇಷ ರೈಲು ಬೆಳಗಾವಿಯಿಂದ ಫೆಬ್ರವರಿ 17 ರಂದು ಶನಿವಾರ 10.35 ಕ್ಕೆ ಪ್ರಯಾಣ ಬೆಳೆಸಿದರೆ, ಸೋಮವಾರ 10.35 ಕ್ಕೆ ಅಯೋಧ್ಯೆ ತಲುಪಲಿದೆ. ಅಯೋಧ್ಯೆಯಿಂದ ಫೆಬ್ರವರಿ 20 ರಂದು ರಾತ್ರಿ 7.55ಕ್ಕೆ ಮರಳಿ ಸಂಚಾರ ಆರಂಭಿಸುವ ರೈಲು ಮಧ್ಯಾಹ್ನ 16.45 ಕ್ಕೆ ಬೆಳಗಾವಿಯನ್ನು ತಲುಪಲಿದೆ.
ಬೆಳಗಾವಿಯಿಂದ ಅಯೋಧ್ಯೆಗೆ 48 ಗಂಟೆಗಳಲ್ಲಿ ತಲುಪಲಿದ್ದು, ಹೊಸಪೇಟೆ, ಬಳ್ಳಾರಿ ಜಂಕ್ಷನ್, ರಾಯಚೂರು ಜಂಕ್ಷನ್, ಸಿಕಂದರಾಬಾದ್ ಜಂಕ್ಷನ್, ಬಲ್ಲರ್ಷಾ ಮತ್ತು ಪ್ರಯಾಗರಾಜ ಜಂಕ್ಷನ್‌ನಲ್ಲಿ ನಿಲುಗಡೆ ಮಾಡಲಾಗುತ್ತದೆ. ಈ ವಿಶೇಷ ರೈಲು 22 ಕೋಚ್‌ಗಳನ್ನು ಹೊಂದಿದ್ದು, 2462 ಕಿಮೀ ಏಕಮುಖ ಸಂಚಾರ ಕ್ರಮಿಸಲಿದೆ.