ಕೇವಲ ಜೋಳವಲ್ಲದೇ ಪ್ರಸ್ತುತ ಸಿರಿಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಒಟ್ಟು ೧೫ ತರಹದ ಎಲ್ಲಿಯೂ ಸಿಗದ ಹಲವು ಸಿರಿಧಾನ್ಯಗಳನ್ನು ಬೆಳೆದು ಸಾವಿರಾರು ರೂ.ಗಳನ್ನು ಗಳಿಸುತ್ತಿದ್ದಾರೆ. ಒಂದೆಡೆ ದೇಶೀಯ ತಳಿಗಳ ಸಂರಕ್ಷಣೆ ಹಾಗೂ ಇನ್ನೋದೆಡೆ ಆದಾಯ ಎಂಬಂತೆ ಕಾರ್ಯನಿರ್ವಹಿಸುತ್ತೇನೆ. ಒಟ್ಟು ೪ ಎಕರೆಗಳಲ್ಲಿ ಉಳುಮೆ ನಡೆಸುವ ಇವರು, ಹೆಚ್ಚಿನ ಬೆಳೆಗಳನ್ನು ಸ್ಥಳೀಯ ರೈತರಿಗೆ ನೀಡಿ ಬೆಳೆಸಿ, ಬಳಿಕ ಸಂಗ್ರಹಿಸಿ ತಳಿಗಳನ್ನು ಸಂಕ್ಷಿಸುತ್ತೇನೆ. ಮುಂಗಾರು ಹಂಗಾಮಿನಲ್ಲಿ ಸೋಯಾ , ಶೇಂಗಾ, ಹತ್ತಿ ಬೆಳೆದರೆ, ಹಿಂಗಾರು ಹಂಗಾಮಿನಲ್ಲಿ ಅದೇ ಭೂಮಿಯಲ್ಲಿ 24 ತಳಿಗಳ ಜೋಳ ಬೆಳೆಯುತ್ತಿದ್ದೇನೆ. ನಾನು, ಕುಟುಂಬ ಸದಸ್ಯರು ನವೆಂಬರ್‌ನಿಂದ ಮಾರ್ಚ್ – ಏಪ್ರಿಲ್‌ವರೆಗೂ ಕೃಷಿ ಮಾಡುತ್ತೇವೆ . 75-80 ಟನ್ ಪಸಲು ಬರುತ್ತಿದ್ದು, ವರ್ಷಕ್ಕೆ ಎಲ್ಲ ಖರ್ಚು ತೆಗೆದು 3.5 ಲಕ್ಷ ರೂ . ಆದಾಯ ಬರುತ್ತಿದೆ .

ಜೋಳದ ಜತೆಗೆ ಸಾವಯವ ಪದ್ಧತಿಯಲ್ಲೇ ಕುಂಬಳ ಸೇರಿ ಹಲವು ಬಗೆಯ ತರಕಾರಿ ಬೆಳೆಯುತ್ತಿರುವ ಇವರಿಗೆ ಸಾವಯವ ಕೃಷಿ ಪಂಡಿತ,‌ ಕೃಷಿ ರತ್ನ ಇತ್ಯಾದಿ ಪ್ರಶಸ್ತಿಗಳು ಇವರಿಗೆ ಸಂದಿವೆ.‌