ಬೆಳಗಾವಿ : ಬೆಳಗಾವಿಯಿಂದ ಗೋವಾಗೆ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆಯ ಅಂಜಣೆ ಎಂಬ ಅಣೆಕಟ್ಟು ಪ್ರದೇಶದ ಬಳಿ ಕುಸಿದಿದೆ. ಆದ್ದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಸಂಚಾರ ವ್ಯವಸ್ಥೆ ತೀರಾ ಹದಗೆಟ್ಟಿದೆ. ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗೋವಾದಿಂದ ಅನಮೋಡ ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬದಲಿ ಮಾರ್ಗವಾಗಿರುವ ಚೋರ್ಲಾ ಘಾಟ್ ಸಹಾ ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.
ಬೆಳಗಾವಿ-ಚೋರ್ಲಾ ರಸ್ತೆ ಕುಸಿತ
