ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣ ಅರ್ಧ ಶತಮಾನಕ್ಕೂ ಭವ್ಯ ಇತಿಹಾಸ ಹೊಂದಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಕೇಂದ್ರಬಿಂದುವಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳು ದೇಶದ ಬೇರೆ ಬೇರೆ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಇದೀಗ ಈ ವಿಮಾನ ನಿಲ್ದಾಣ ಪ್ರಯಾಣಿಕರ ಜೊತೆ ಸರಕು ಸಾಗಾಟದಲ್ಲೂ ಸಾಧನೆ ಮೆರೆದಿದ್ದು, ಜಿಲ್ಲೆಯ ಜನತೆಯ ಪಾಲಿಗೆ ಖುಷಿಯ ಸಂಗತಿ ಎನ್ನಬಹುದು.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಇತ್ತೀಚೆಗೆ ಬೆಳಗಾವಿ ವಿಮಾನ ನಿಲ್ದಾಣದ ಪ್ರಯಾಣಿಗರ ಪ್ರಯಾಣದ ಮಾಹಿತಿಯನ್ನು ನೀಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕರ ದಟ್ಟಣೆಯು 44.51% ರಷ್ಟು ಹೆಚ್ಚಾಗಿದೆ.

ಅಕ್ಟೋಬರ್ 2023 ರಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಒಟ್ಟು 29,285 ಪ್ರಯಾಣಿಕರನ್ನು ಬರಮಾಡಿಕೊಂಡಿತು. ಹಿಂದಿನ ತಿಂಗಳ ಅಂಕಿಅಂಶ 20,265 ಕ್ಕೆ ಹೋಲಿಸಿದರೆ ಅದು 9,020 ನಷ್ಟು ಹೆಚ್ಚಳವಾಗಿದೆ. ಹಿಂದೆಂದೂ ಕಾಣದಷ್ಟು ಜನ ಈ ವಿಮಾನ ನಿಲ್ದಾಣಕ್ಕೆ ಮುಗಿ ಬೀಳುತ್ತಿದ್ದಾರೆ.

ಅಕ್ಟೋಬರ್‌ನಲ್ಲಿ 578 ವಿಮಾನಗಳು ಕಾರ್ಯನಿರ್ವಹಿಸಿವ. 1 ಮೆಟ್ರಿಕ್ ಟನ್‌ಗಿಂತ ಕಡಿಮೆ ಸರಕು ಸಾಗಣೆಯಾಗಿದೆ. ಆದ್ದರಿಂದ ಇದು ಜನರಷ್ಟೇ ಅಲ್ಲ, ಸರಕುಗಳು ಕೂಡ ಈ ವಿಮಾನ ನಿಲ್ದಾಣದ ಮೂಲಕ ಈಗ ಸಂಚಾರ ನಡೆಸುತ್ತಿದೆ.

ಬೆಳಗಾವಿ ವಿಮಾನ ನಿಲ್ದಾಣವು ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಅಹಮದಾಬಾದ್, ನಾಗ್ಪುರ, ಸೂರತ್, ಜೋಧಪುರ, ಜೈಪುರ ಮತ್ತು ತಿರುಪತಿಗೆ ಸಂಪರ್ಕ ಹೊಂದಿದೆ.

ಸ್ಟಾರ್ ಏರ್ ಬೆಳಗಾವಿಯಿಂದ ಅಹಮದಾಬಾದ್, ಜೋಧಪುರ, ಮುಂಬೈ, ಸೂರತ್, ತಿರುಪತಿ, ನಾಗ್ಪುರ, ಜೈಪುರ ಮತ್ತು ಭುಜ್ ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಅಹಮದಾಬಾದ್ ಮೂಲಕ ನೇರ ವಿಮಾನಗಳನ್ನು ಹಾರಾಟ ನಡೆಸುತ್ತಿವೆ.

 ಅಲ್ಲದೇ ಇಂಡಿಗೋ ಸಂಸ್ಥೆಯು ಬೆಳಗಾವಿಯಿಂದ ದೆಹಲಿ ಮತ್ತು ಬೆಂಗಳೂರಿಗೆ ಹೊಸದಾಗಿ ಎರಡು ವಿಮಾನಗಳ ಸಂಚಾರವನ್ನು ಪ್ರಾರಂಭಿಸಿದೆ. ಹೈದರಾಬಾದ್‌ಗೆ ಪ್ರತಿದಿನ ವಿಮಾನಗಳ ಸಂಚಾರ ನಡೆಸುತ್ತಿವೆ.