ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌(ನ್ಯಾಕ್‌) ‘ಎ’ ಗ್ರೇಡ್‌ ಮಾನ್ಯತೆ ಕೊಟ್ಟಿದೆ.

ಡಾ.ಪ್ರವೀಣ ಕರ್, ಡಾ. ಸುಭಾಷಚಂದ್ರ ಭಟ್, ಡಾ.ಅಶೋಕ ವಂಜನಿ ಅವರನ್ನು ಒಳಗೊಂಡ ತಜ್ಞರ ತಂಡ ಅ.19, 20ರಂದು ಕಾಲೇಜಿಗೆ ಭೇಟಿ ನೀಡಿ, ಶೈಕ್ಷಣಿಕ ಗುಣಮಟ್ಟದ ಕುರಿತು ಮೌಲ್ಯಮಾಪನ ಮಾಡಿತ್ತು. ಈ ತಂಡ 3.11 ಸಿ.ಜಿ.ಪಿ.ಎ ಅಂಕಗಳೊಂದಿಗೆ ‘ಎ’ ಗ್ರೇಡ್ ಮಾನ್ಯತೆ ನೀಡಿದೆ.

ಕಾಲೇಜು ಸ್ಥಾಪನೆಯಾದ ಮೇಲೆ ನಂತರ ಮೊದಲ ಬಾರಿ ನ್ಯಾಕ್‌ನಿಂದ ಮೌಲ್ಯಮಾಪನ ನಡೆದಿತ್ತು. ಮೊದಲ ಆವೃತ್ತಿಯಲ್ಲೇ ಉತ್ತಮ ಅಂಕ ಸಿಕ್ಕಿದ್ದಕ್ಕೆ ರಾಣಿ ಚನ್ನಮ್ಮ ವಿ.ವಿ ಕುಲಪತಿ ಪ್ರೊ.ವಿಜಯ್ ನಾಗಣ್ಣವರ, ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಬಿ.ಡಿ.ಕಟ್ಟಿ, ಉಪಕುಲಸಚಿವ ಡಾ. ಡಿ. ಕೆ. ಕಾಂಬಳೆ, ಪ್ರಾಚಾರ್ಯ ಎಸ್.ಎಸ್.ತೇರದಾಳ ಹರ್ಷ ವ್ಯಕ್ತಪಡಿಸಿದ್ದಾರೆ.