ಬೆಳಗಾವಿ ಅ. 3 : ಈ ಮೊದಲು ಇದ್ದ ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆದಿದ್ದರೂ ಕೂಡ ಅಪೂಣವಾದ ಕಾರಣ ಬಿಡುಗಡೆಗೊಳಿಸಲು ಸಾಧ್ಯ೭ವಾಗಲಿಲ್ಲ. ಆದರೆ ಪೂರ್ಣಗೊಂಡ ವರದಿಯನ್ನು ಸಲ್ಲಿಸಲು ಕೇಳಿದ್ದೇನೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ಆಯೋಗವು ಜಾತಿ ಗಣತಿ ವರದಿಯನ್ನು ಇದುವರೆಗೂ ನೀಡಿಲ್ಲ. ಜಾತಿ ಗಣತಿ ಹಾಗೂ ಸಾಮಾಜಿಕ, ಆರ್ಥಿಕ ಸರ್ವೆಗೆ ಕಾಂತರಾಜು ಅಧ್ಯಕ್ಷತೆಯಲ್ಲಿ ಆದೇಶ ನೀಡಿದ್ದೆ. ಆದರೆ ವರದಿ ಪೂರ್ಣಗೊಳ್ಳುವ ಮುನ್ನವೇ ಸರ್ಕಾರದ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಆ ವರದಿ ತೆಗೆದುಕೊಳ್ಳಲಿಲ್ಲ ಆರೋಪಿಸಿದರು.

ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿ ಮುಗಿದು, ಬಿಜೆಪಿ ನೇಮಿಸಿದ ಜಯಪ್ರಕಾಶ ಹೆಗಡೆ ಅವರು ಈಗ ಅಧ್ಯಕ್ಷರಾಗಿದ್ದಾರೆ. ಸರ್ಕಾರಕ್ಕೆ ಇದುವರೆಗೂ ಅವರು ವರದಿ ಸಲ್ಲಿಸಿಲ್ಲ. ಕಾರ್ಯದರ್ಶಿಯೂ ಸಹಿ ಮಾಡಿಲ್ವಂತೆ. ಅವರು ವರದಿ ಕೊಟ್ಟರೆ ನೋಡೋಣ. ಒಂದು ಸಾರಿ ವರದಿ ಕೇಳಿದ್ದೆ ಕೊಡ್ತೀನಿ ಎಂದು ಹೇಳಿ ಕೊಡಲಿಲ್ಲ ಎಂದು ಅವರು ತಿಳಿಸಿದರು.

ಶಿವಮೊಗ್ಗ ಗಲಾಟೆಯಲ್ಲಿ ಕಲ್ಲು ತೂರಿದವರ ವಿರುದ್ಧ ಕ್ರಮ ವಿಚಾರಕ್ಕೆ ಗಲಾಟೆಗೆ ಕಾರಣರಾದವರು ಯಾವುದೇ ಕೋಮು, ಪಕ್ಷಕ್ಕೆ ಸೇರಿದರೂ ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದರು.