ನವದೆಹಲಿ: ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ವಿಭಾಗೀಯ/ಉಪ-ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸುವದು ಅತ್ಯವಶ್ಯಕ ಎಂದು ಆಗ್ರಹಿಸಿ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯ ಸಂಸದ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಅವರು, ಉತ್ಪಾದನಾ ಘಟಕಗಳು ಬೆಂಗಳೂರು ಹೊರತುಪಡಿಸಿದರೆ, ಅತ್ಯಧಿಕ ಸಂಖ್ಯೆಯಲ್ಲಿ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕ ವಿಮಾದಾರರಿದ್ದ, ಸದ್ಯ ಬೆಳಗಾವಿ ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ವ್ಯಾಪ್ತಿಯು ಹುಬ್ಬಳ್ಳಿ ಕಛೇರಿ ವ್ಯಾಪ್ತಿಗೆ ಒಳ್ಪಡುತ್ತಿದೆ. ಹೀಗಾಗಿ ಕಾರ್ಮಿಕರ ಕುಂದು ಕೊರತೆಗಳ ಪರಿಹಾರಕ್ಕಾಗಿ ಸುಮಾರು 120 ಕಿ.ಮೀ ದೂರದ ಹುಬ್ಬಳ್ಳಿಯ ಕಛೇರಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ವಿಮಾ ಸಂಸ್ಥೆಯ ವಿಭಾಗೀಯ/ಉಪ-ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೇಡಿಕೆಯನ್ನು ಆಲಿಸಿದ ಕೇಂದ್ರ ಸಚಿವರು ಶೀಘ್ರದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಇಎಸ್ಐ ಪ್ರಾದೇಶಿಕ ಕಚೇರಿ ಸ್ಥಾಪನೆ: ಶೆಟ್ಟರ
