ನೇಗಿನಹಾಳ: ನಮ್ಮದು ಶರಣರು, ಸಂತರು, ಮಹಾತ್ಮರು ನಡೆದಾಡಿದ ಪುಣ್ಯಭೂಮಿಯಾಗಿದ್ದು ಇಲ್ಲಿ ಜನಸಾಮಾನ್ಯರ ಬದುಕಿಗೆ ಕಾಯಕ, ಅನುಭಾವ, ದಾಸೋಹದ ಮಹತ್ವ ತಿಳಿಸಿ ಸರ್ವ ಜನಾಂಗದ ಒಳಿತನ್ನು ಬಯಸಿದವರು ಸಿದ್ಧಾರೂಢ ಮಹಾತ್ಮರು ಎಂದು ನೇಗಿನಹಾಳ ಸಿದ್ಧಾರೂಢ ದೇವಸ್ಥಾನ ಕಮೀಟಿಯ ಮುಖ್ಯಸ್ಥರಾದ ಪ್ರಸಾದ ದಿವಾಣದ ಹೇಳಿದರು.
ಬೈಲಹೊಂಗಲ ತಾಲೂಕಿನ ಗಿನಹಾಳ ಗ್ರಾಮದ ಸಿದ್ಧಾರೂಢ ನಗರದಲ್ಲಿನ ಸಿದ್ಧಾರೂಢ ಮಠದ ಜಾತ್ರೆ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ವ ಕಾರ್ಯಕ್ರಮಗಳು ಇಂಚಲದ ಶಿವಾನಂದ ಭಾರತಿ ಮಹಾಸ್ವಾಮಿಗಳು ಸಾನಿದ್ಯದಲ್ಲಿ ಹಾಗೂ ನೇಗಿನಹಾಳದ ಅದ್ವೈತಾನಂದ ಭಾರತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿವೆ ಎಂದರು. ಜಾತ್ರಾ ಮಹೋತ್ಸವದ ಮೊದಲ ದಿನದಂದು ಓಂಕಾರ ಪ್ರಣವ ಧ್ವಜಾರೋಹಣವನ್ನು ಕಾದರವಳ್ಳಿಯ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ನೇರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಮಹಾಸ್ವಾಮಿಗಳು,
ರಾಚಪ್ಪ ಚನ್ನಪ್ಪಗೌಡರ, ನಿಂಗಪ್ಪ ತುರಮರಿ, ಅರ್ಜುನ ವನ್ನೂರ, ಶಂಕರ ಗಾಣಗಿ, ಬಸವಾಣೆಪ್ಪ ಹಂಪಣ್ಣವರ, ಅಶೋಕ ಜೈನರ, ಮಡಿವಾಳಪ್ಪ ಗುಡಿ, ಮಡಿವಾಳಪ್ಪ ಬುಡ್ಡಪ್ಪನವರ, ಶಿವಪ್ಪ ಸಾಲಿ. ಪಕ್ಕೀರಪ್ಪ ಉಡಕೇರಿ, ಬಸವರಾಜ ಕೆಸರಕೊಪ್ಪ, ಗುರುಪಾದ ಮಠಪತಿ, ರುದ್ರಪ್ಪ ಜಮನೂರ, ಸಿದ್ಧಾರೂಢ ದಿವಾಣದ, ಬಸಪ್ಪ ಉಳವಿ, ಆನಂದ ಮಡಿವಾಳರ, ಜೈಪಾಲ ಜೈನರ, ಚಂಬಣ್ಣಾ ದಿವಾಣದ, ಮಹಾದೇವ ಮುದ್ದಣ್ಣವರ ಹಾಗೂ ಸಿದ್ಧಾರೂಢ ದೇವಸ್ಥಾನ ಕಮಿಟಿಯ ಸರ್ವ ಸದ್ಭಕ್ತರು, ನೇಗಿನಹಾಳ ಹಾಗೂ ಕೆಸರಕೊಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿವರ
ಇಂದಿನಿಂದ ಪೂಜ್ಯಶ್ರೀ ಅಧ್ವೈತಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ದಿ. ೨೬ ರ ವರೆಗೆ ವಿವಿಧ ಪೂಜ್ಯರಿಂದ ಆಶೀರ್ವಚನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸಗಳು, ಪ್ರತಿದಿನ ಸಾಯಂಕಾಲ ಪ್ರಸಾದ ದಾಸೂಹ, ವಿವಿಧ ಗಣ್ಯರಿಗೆ, ಸಾಧಕರಿಗೆ, ದಾಸೋಹಿಗಳಿಗೆ ಗೌರವ ಸತ್ಕಾರಗಳು ನಡೆಯಲಿವೆ ಎಂದು ಹೇಳಿದರು.
ದಿ. 24 ರಂದು ಇಂಚಲದ ಶಿವಾನಂದ ಭಾರತಿ ಮಹಾಸ್ವಾಮಿಗಳಿಗೆ ನೀಲಮ್ಮ ದಿವಾಣದ ಇವರಿಂದ ತುಲಾಭಾರ, ಬೆಳ್ಳಿ ಕೀರಿಟ ಪೂಜೆ ನಡೆಯುವುದು.
ದಿ.25 ರಂದು ಸಿದ್ದಾರೂಢ, ಗಣೇಶ, ದೇವಿ ಮೂರ್ತಿಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚಣೆ, ಕುಂಭೂತ್ಸವ ಆರತಿ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲಕ್ಕಿ ಮೆರೆವಣಿಗೆ ನಡೆಯಲಿದೆ.
ದಿ. 26 ರಂದು ನಯಾನಗರದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಕೌದಿ ಪೂಜೆ, ಮಹಾಪ್ರಸಾದ, ಗಣ್ಯರಿಗೆ ಮತ್ತು ದಾಸೋಹಿಗಳಿಗೆ ಸತ್ಕಾರ ಕಾರ್ಯ ನಡೆಯಲಿದೆ ಎಂದು ಹೇಳಿದರು.