ಬೆಳಗಾವಿ: ಪ್ರಯಾಣಿಕರ ಅನುಕೂಲಕ್ಕಾಗಿ SSS ಹುಬ್ಬಳ್ಳಿ–ದಾದರ–SSS ಹುಬ್ಬಳ್ಳಿ ಎಕ್ಸ್‌ಪ್ರೆಸ್ ಖಾನಾಪುರದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಖಾನಾಪುರ (KNP) ರೈಲು ನಿಲ್ದಾಣದಲ್ಲಿ ದಿನಾಂಕ 15.09.2025 ರಿಂದ ರೈಲು ಸಂಖ್ಯೆ 17317/17318 SSS ಹುಬ್ಬಳ್ಳಿ–ದಾದರ–SSS ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲುಗಳಿಗೆ ಒಂದು ನಿಮಿಷ ನಿಲುಗಡೆ ನೀಡಿದೆ. ರೈಲು ಸಂಖ್ಯೆ 17317 (SSS ಹುಬ್ಬಳ್ಳಿ–ದಾದರ) 17:59 ಕ್ಕೆ ಖಾನಾಪುರ ತಲುಪಿ 18:00 ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ದಿನಾಂಕ 16.09.2025 ರಂದು ರೈಲು ಸಂಖ್ಯೆ 17318 (ದಾದರ–SSS ಹುಬ್ಬಳ್ಳಿ) 08:40 ಕ್ಕೆ ಖಾನಾಪುರ ತಲುಪಿ 08:41 ಕ್ಕೆ ನಿರ್ಗಮಿಸಲಿದೆ. ಪ್ರಯಾಣಿಕರು ಈ ನಿಲುಗಡೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕೋರಲಾಗಿದೆ.
ಸೋಮವಾರ ಕಾರ್ಯಕ್ರಮ :
ಸೆಪ್ಟೆಂಬರ್ 15ರಂದು ಖಾನಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆ. ಖಾನಾಪುರ ತಾಲೂಕಿನಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಹುಬ್ಬಳ್ಳಿ- ದಾದರ್ ರೈಲು ನಿಲುಗಡೆಗೆ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿ ಈ ಭಾಗದ ಜನತೆಗೆ ಅನುಕೂಲತೆ ಮಾಡಿಕೊಟ್ಟಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.
ಹುಬ್ಬಳ್ಳಿ–ದಾದರ್ ರೈಲು ಖಾನಾಪುರದಲ್ಲೂ ನಿಲುಗಡೆ
