ಬೈಲಹೊಂಗಲ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬೈಲಹೊಂಗಲ ಪುರಸಭೆ ಯನ್ನು ನಗರ ಸಭೆ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬುಧವಾರ ನಂದಿ ಗಿರಿಧಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಬೈಲಹೊಂಗಲ ಪುರಸಭೆ 2011 ಜನಗಣತಿ ಪ್ರಕಾರ ಜನಸಂಖ್ಯೆ 49.182 ಇದ್ದು, ವಿಸ್ತೀರ್ಣ 22.11ಚ. ಮಿ ಇರುತ್ತದೆ.ಜನ ಸಾಂದ್ರತೆ ಪ್ರತಿ ಚ ಕೀ ಮಿ ಗೆ 2.224 ಇರುತ್ತದೆ.
ಕೃಷಿ ಯೇತರ ಚಟುವಟಿಕೆ ಶೇ. 55ರಷ್ಟು ಇವೆ.
ಬೈಲಹೊಂಗಲ ಪುರಸಭೆ ಯನ್ನು ನಗರ ಸಭೆ ಯನ್ನಾಗಿ ಮೇಲ್ದ ರ್ಜೆ ಗೆರಿಸಲು 27-9- 2023 ರಂದು ನಡೆದ ಆಡಳಿತಾ ಧಿಕಾರಿ ಸಾಮಾನ್ಯ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಪಟ್ಟಣ ಪ್ರದೇಶಗಳು ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಅಭಿವೃದ್ಧಿ ಬೇಡಿಕೆಯೂ ಹೆಚ್ಚುತ್ತಿದೆ.
ಆ ನಿಟ್ಟಿನಲ್ಲಿ ಬೈಲಹೊಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಶಾಸಕ ಮಹಾಂತೇಶ ಕೌಜಲಗಿ ಅವರ ಬಹು ದಿನದ ಕನಸು ನನಸಾಗಿದೆ.
ನಗರಸಭೆಯಾದರೆ ಸರಕಾರದಿಂದ ಸಿಗುವ ಅನುದಾನ ಮೂರು ಪಟ್ಟು ಹೆಚ್ಚಲಿದ್ದು, ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂಬ ನಿರೀಕ್ಷಿಯಿದೆ.