ಚಿಕ್ಕೋಡಿ : ಮದುವೆ ಸಮಾರಂಭಕ್ಕೆ ಮಾಡಿದ್ದ ಮಾಂಸಾಹಾರ ಊಟ ಸೇವಿಸಿದ ಸುಮಾರು 100 ಕ್ಕೂ ಅಧಿಕ ಜನ ಅಸ್ವಸ್ಥರಾದ ಘಟನೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಜಾಕಿರ್ ಪಟೇಲ್ ಎಂಬುವವರ ಮಗಳ ಮದುವೆ ಸಮಾರಂಭದಲ್ಲಿ ಸೇವಿಸಿದ ಜನರಲ್ಲಿ 100ಕ್ಕೂ ಅಧಿಕ ಜನರು ಅಸ್ವಸ್ಥರಾದ ಘಟನೆ ಜರುಗಿದ್ದು, ಮದುವೆಗೆ ಆಗಮಿಸಿದ್ದ ಜನರ ಭೋಜನಕ್ಕಾಗಿ ಸಸ್ಯಾಹಾರ ಹಾಗೂ ಮಾಂಸಾಹಾರ ಅಡುಗೆ ತಯಾರಿಸಲಾಗಿತ್ತು. ಅದರಲ್ಲಿ ಮಾಂಸಾಹಾರ ಸೇವಿಸಿದ್ದ ನೂರಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ.ಅಸ್ವಸ್ಥಗೊಂಡವರನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ತೀವ್ರ ತೊಂದರೆಗೊಳಗಾದರವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಹಾಗೂ ಮಿರಜ್ ಆಸ್ಪತ್ರೆಗೆ ಸೇರಿಸಿಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಡಿಎಸ್ಪಿ ಗೌಡರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮದುವೆ ಭೋಜನ ಸೇವಿಸಿದವರು ಅಸ್ವಸ್ಥ
