ಬೆಳಗಾವಿ : ಮನೆ ಬಾಗಿಲು ಮುರಿದು ಚಿನ್ನ ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ.
ಏಪ್ರಿಲ್ 4 ರಂದು ಗೋಕಾಕ ತಾಲ್ಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಮಹಾದೇವ ಪಂಡಪ್ಪ ಸವಸುದ್ದಿ, ಇವರ ಮನೆಯ ಮುಂಬಾಗಿಲದ ಕೀಲಿ ಕೊಂಡಿಯನ್ನು ಮುರಿದು ಮನೆಯ ಒಳಗೆ ನುಗ್ಗಿ ಟ್ರೇಜರಿಯ ಬಾಗಿಲನ್ನು ಮುರಿದು ಅದರಲ್ಲಿನ 150 ಗ್ರಾಂ ತೂಕಿನ ಬಂಗಾರದ
ಆಭರಣಗಳು ಮತ್ತು 20 ಸಾವಿರ ರೂ ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು, ಕಳ್ಳತನ ಮಾಡಿದ ಬೈಲಹೊಂಗಲ ತಾಲೂಕಿನ ಮೋಹರೆ ಗ್ರಾಮದ ರಾಮಸಿದ್ದ ಫಕೀರಪ್ಪ ತಳವಾರ (19), ಕೊಳ್ಳಾನಟ್ಟಿ ಗ್ರಾಮದ ನಾಗರಾಜ ಶಿವಲಿಂಗ ಮ್ಯಾಗೇರಿ (21) ಇವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡಿದ ಬಂಗಾರದ ಆಭರಣ ಮಾರಿ ಖರೀದಿ ಮಾಡಿದ್ದ ಆರೋಪಿತರ ಬಳಿಯಿದ್ದ ಕಾರು ಮತ್ತು ಕೃತ್ಯಕ್ಕೆ ಬಳಸಿದ್ದ ಮೊಟರ ಬೈಕ್, ಮೊಬೈಲ, ಉಳಿದ ಬಂಗಾರ ಆಭರಣ, ಮತ್ತು ನಗದು ಹಣವನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮನೆಗಳ್ಳರನ್ನು ಬಂಧಿಸಿದ ಪೊಲೀಸರು
