ಕೇಂದ್ರದ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ (ಎನ್‌ಐಆರ್‌ಎಫ್) 2023 ರ ಪಟ್ಟಿಯನ್ನು ದಿ. ಜೂನ್ 5 ರಂದು ಬಿಡುಗಡೆಗೊಳಿಸಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ 63 ಸ್ಥಾನ ಹಾಗೂ ಕೆಎಲ್‌ಇ ಫಾರ್ಮಾಸಿ ಹಾಗೂ ವೈದ್ಯವಿಜ್ಞಾನ ಮಹಾವಿದ್ಯಾಲಯಗಳು 50ರ ಒಳಗಿನ ಸ್ಥಾನ ಪಡೆದಿವೆ.
ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ – 63 ನೇ ಸ್ಥಾನ
ಒಟ್ಟಾರೆ RANK 92 – ಎಲ್ಲ ಮಾನದಂಡಗಳು
ಇಂಜಿನಿಯರಿಂಗ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ – 52 ನೇ ಸ್ಥಾನ
ನಿರ್ವಹಣೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ – 95 ನೇ ಶ್ರೇಣಿ
ಔಷಧಾಲಯ
ಕೆಎಲ್‌ಇ ಫಾರ್ಮಾಸಿ ಮಹಾವಿದ್ಯಾಲಯ – 39 ರ ರ್ಯಾಂಕ್
ದಂತ ವಿಜ್ಞಾನ
ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯ – ರ್ಯಾಂಕ್ 35
ಎನ್‌ಐಆರ್ ಎಫ್ – 23
ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ ಅಗ್ರ ಶ್ರೇಯಾಂಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. JNU ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ. ಮೂರು ಖಾಸಗಿ ವಿಶ್ವವಿದ್ಯಾಲಯಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಸತತ 5 ವರ್ಷಗಳಿಂದ ಐಐಟಿ ಮದ್ರಾಸ್ ಎಲ್ಲ ವಿಭಾಗದಡಿಯಲ್ಲಿ ನಂಬರ್ 1 ಶೈಕ್ಷಣಿಕ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ 8 ವರ್ಷಗಳಿಂದ ಅತ್ಯುತ್ತಮ ಎಂಜಿನಿಯರಿಂಗ್ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಉನ್ನತ ನಿರ್ವಹಣಾ ಕಾಲೇಜು ಐಐಎಂ-ಅಹಮದಾಬಾದ್ ಆಗಿದ್ದು, ಮೂರು ಎಂಜಿನಿಯರಿಂಗ್ ಕಾಲೇಜುಗಳು ಟಾಪ್ 10 ಬಿ-ಸ್ಕೂಲ್ ವರ್ಗದ ಅಡಿಯಲ್ಲಿವೆ. ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು