ಬೆಳಗಾವಿ:ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೆ, ಕಿಣೆಯ ಗ್ರಾಮ ಪಂಚಾಯತ್ ಪಿಡಿಓಗೆ ಮರಾಠಿ ಮಾತನಾಡುವಂತೆ ಅವಾಚ್ಚ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಪದೆ ಪದೆ ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರಾ.‌ ಕಂಡಕ್ಟರ್ ಮೇಲಿನ ಹಲ್ಲೆ ಬಳಿಕವೂ ಬೆಳಗಾವಿ ಜಿಲ್ಲಾಡಳಿತ, ಪೊಲೀಸ ಇಲಾಖೆ ಎಚ್ಚೆತ್ತುಕೊಂಡಿಲ್ಲ.‌ ಇದು ಮಹಾರಾಷ್ಟ್ರ ಸರ್ಕಾರವೋ ಕರ್ನಾಟಕ ಸರ್ಕಾರವೋ ಅನೋ ಅನುಮಾನ ಸದ್ಯ ಕನ್ನಡಿಗರಲ್ಲಿ ಕಾಡುತ್ತಿದೆ.
ಕಿಣೆಯ ಗ್ರಾಮ ಪಂಚಾಯತ್ ಪಿಡಿಓ ನಾಗೇಂದ್ರ ಪತ್ತಾರಗೆ ಕನ್ನಡ ಮಾತನಾಡುವಂತೆ ಕಿಣೆಯೆ ಗ್ರಾಮದ ತಿಪ್ಪಣ್ಣ ಸುಭಾಷ ಡೊಕ್ರೆ ಎಂಬ ಪುಂಡ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಾನೆ‌. ಮರಾಠಿ ಭಾಷಿಕ ಪ್ರದೇಶದಲ್ಲಿ ನಿತ್ಯವೂ ಆತಂಕದಲ್ಲೇ ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ನಮಗೆ ಪೊಲೀಸ್ ಪ್ರೊಟೆಕ್ಷನ್ ಬೇಕು. ಏಕಾಏಕಿ ಅವಾಚ್ಚಾ ಶಬ್ದಗಳಿಂದ ನಿಂದನೆಗೆ ಮಾಡ್ತಾರೆ. ಮರಾಠಿ ಮಾತನಾಡು ಎಂದು ಒತ್ತಾಯ ಮಾಡುತ್ತಿದ್ದಾರೆ. ನಾನು ಇವತ್ತೇ ಆ ವ್ಯಕ್ತಿಯನ್ನ ನೋಡತ್ತಿರುವೆ. ಏನು ಸಮಸ್ಯೆ ಇದೆ ಅದನ್ನು ಬರೆದು ಕೊಡು ಎಂದು ಹೇಳಿದರೂ ಕೇಳುತ್ತಿಲ್ಲ. ನಿತ್ಯವೂ ಆತಂಕದಲ್ಲಿಯೇ ಕೆಲಸ ಮಾಡೋ ಪರಿಸ್ಥಿತಿ ಇದೆ. ನಮಗೆ ಪೊಲೀಸ ಭದ್ರತೆ ಬೇಕು ಎಂದು ಪಿಡಿಓ ನಾಗೇಂದ್ರ ಪತ್ತಾರ ಹೇಳಿದ್ದಾರೆ.