ಬೆಳಗಾವಿ: ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇರುವ ಹೊಸ ವೆಬ್ ಸೈಟ್ ಅನ್ನು ರಚಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹೊಸ ವೆಬ್ ಸೈಟ್ ನಲ್ಲಿ ಮಾಹಿತಿ ಇದ್ದು ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ಪಶ್ಚಿಮ ಘಟ್ಟಗಳು, ಜಲಪಾತಗಳು, ಅಣೆಕಟ್ಟೆಗಳು, ವನ್ಯಜೀವಿಗಳ ನೋಡಲು ಸಫಾರಿ ಮುಂತಾದವುಗಳ ಬಗ್ಗೆ ಸಾರಿಗೆ ಸಹಿತ ವೆಬ್ ಸೈಟ್ ನಲ್ಲಿ ಮಾಹಿತಿ ಲಭ್ಯವಾಗಲಿದೆ. ಹೊಸತಾನಗಳ ಕುರಿತು ಪ್ರವಾಸಿಗರು ಮಾಹಿತಿ ನೀಡಿದರೆ ಅದನ್ನೂ ಇದರಲ್ಲಿ ಸೇರಿಸಲಾಗುವುದು ಎಂದು ಹೇಳಿದರು
ಕರ್ನಾಟಕ, ಗೋವಾ, ಮಹಾ ರಾಷ್ಟ್ರ ಗಡಿ ತಾಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದವರು ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕೆಲ ತಾಣಗಳ ಬಗ್ಗೆಯೂ ಸಂಕ್ಷಿಪ್ತ ಮಾಹಿತಿ ಇದ್ದು ಈ ಕುರಿತು ಮಹಾರಾಷ್ಟ್ರ ಗೋವಾ ರಾಜ್ಯದವರು ರಾಜ್ಯದ ಪ್ರವಾಸೋದ್ಯಮ ಇಲಾಖೆಯೊಂದಿಗೆ ಮಾತನಾಡಿ ಅವರ ಸರ್ಕಾರವನ್ನು ಕೋರುತ್ತೇವೆ ಎಂದರು
ಮಳೆಗಾಲದಲ್ಲಿ ಜಲಪಾತಗಳನ್ನು ನೋಡಲು ಅರಣ್ಯ ಇಲಾಖೆಯ ಕಿರಿಕಿರಿ ಹಾಗೂ ಬಂದ್ ಮಾಡುತ್ತಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರೀಯಿಸಿದ ಅವರು, ಈ ಕುರಿತು ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಜಂಟಿಯಾಗಿ ರಕ್ಷಣೆ ಹಾಗೂ ಅವಕಾಶ ನೀಡುವ ಕುರಿತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಜೋಗುಳ ಬಾವಿಯಿಂದ ರೋಪವೇ ನಿರ್ಮಾಣ ಮಾಡುವ ಕುರಿತು ಟೆಂಡರ್ ಪ್ರಕ್ರಿಯೆಯಲ್ಲಿದ್ದು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು.
ಬೆಳಗಾವಿ ಪ್ರವಾಸಿತಾಣಗಳ ಜಾಲತಾಣ ಬಿಡುಗಡೆ
