ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಪ್ರತಿಷ್ಠಾಪುಸಲಾಗಿದ್ದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ ನಡುವೆಯೇ ನಡೆಯಿತು.ಶಿವಾಜಿ ಮಹಾರಾಜರ 13ನೇ ವಂಶಸ್ಥಜ ಶಿವೇಂದ್ರರಾಜೆ ಬೋಸ್ಲೆ ಅವರು ಅನಾವರಣ ಮಾಡಿದರು.
ಮೇಯರ್ ಸವಿತಾ ಕಾಂಬಳೆ, ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು. ಈ ವೇಳೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಸಂಭಾಜಿ ಮಹಾರಾಜರ ಪ್ರತಿಮೆ ಪರದೆ ತೆರೆಯದಂತೆ ಸೂಚನೆ ನೀಡಿದರು. ಈ ವೇಳೆ ಗರಂ ಆದ ಮೇಯರ್ ಸವಿತಾ ಏನು ನೀವು ಮೂರ್ತಿ ಅನಾವರಣ ಮಾಡುವದನ್ನು ತಡೆಯುತ್ತಿರಾ ಎಂದು ಆಕ್ರೋಶ ಮಾತುಗಳಾನ್ನಾಡಿದರಿಂದ ಉಪ ಆಯುಕ್ತ ಮೌನಕ್ಕೆ ಶರಣಾದರು.
ಇಬ್ಬರು ಬೆಂಬಲಿಗರ ನಡುವೆ ವಾಗ್ವಾದ ಮೂರ್ತಿ ಅನಾವರಣ ಘೋಷಣೆ ಹಿನ್ನೆಲೆ ಸ್ಥಳದಲ್ಲೆ ಕೊಂಡುಸ್ಕರ್ ಬೆಂಬಲಿಗರು ಬೀಡುಬಿಟ್ಟಿದ್ದು, ಛತ್ರಪತಿ ಸಂಭಾಜಿ ಮೂರ್ತಿ ಭವನಕ್ಕೆ ಅಳವಡಿಸಲಾಗುತ್ತಿದ್ದ ಲೈಟಿಂಗ್, ಧ್ವಜವನ್ನು ಕೊಂಡುಸ್ಕರ್ ಬೆಂಬಲಿಗರು ತೆರವು ಮಾಡಿದರು. ಇದರಿಂದ ಈ ವೇಳೆ ಎರಡು ಗುಂಪುಗಳಾದ ಶಾಸಕ ಅಭಯ ಪಾಟೀಲ್ ಮತ್ತು ಕೊಂಡುಸ್ಕರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.
ಬೆಳಗಾವಿ ಆನಗೋಳದ ನಾಕಾದಿಂದ ಅದ್ಧೂರಿ ಶೋಭಾಯಾತ್ರೆ ನಡೆಸಲಾಯಿತು. ಸಂಭಾಜಿ ಮೂರ್ತಿಯನ್ನುಅನಾವರಣಗೊಳಿಸಲಾಯಿತು. ಸದ್ಯ ಸ್ಥಳದಲ್ಲೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯುವಕರು ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದಿದ್ದಾರೆ. ಸ್ಥಳದಲ್ಲೆ 7ಕೆಎಸ್ ಆರ್ ಪಿ ಪೊಲೀಸ್ ವಾಹನಗಳು, ಎಸಿಪಿ, ಮೂವರು ಸಿಪಿಐಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ ನೀಡಿದ್ದಾರೆ.
ಪ್ರತಿಮೆ ಅನಾವರಣ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಶ್ರೀರಾಮ ಸೇನೆ ಹಿಂದುಸ್ತಾನ ಸಂಘಟನೆಯ ಮುಖ್ಯಸ್ಥ ರಮಾಕಾಂತ ಕೊಂಡುಸ್ಕರ್ ಅವರ ಬೆಂಬಲಿಗರು ಸ್ಥಳದಲ್ಲಿ ಬೀಡುಬಿಟ್ಟಿದ್ದರಿಂದ ತುಸು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.