ಬೆಳಗಾವಿ: ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 30 ರಂದೇ ಘಟನೆ ನಡೆದಿದ್ದು,ಇದೀಗ ಖಡೇ ಬಜಾರ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಕಾಶ ಜಾಧವ ಎಂಬಾತ ನರ್ಸ್ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಅವಳು ನಿರಾಕರಿಸಿದ್ದಳು. ಇದರಿಂದ ನಿರಾಶೆಗೊಂಡಿದ್ದ ಆತ ಆವಳ ಮೇಲೆ ಆಸ್ಪತ್ರೆಯಲ್ಲಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ನರ್ಸ್ ತಂದೆ ಸಾವು :
ಈ ಘಟನೆಯಿಂದ ನರ್ಸ್ ತಂದೆ ತೀವ್ರ ನೊಂದು ಮೃತಪಟ್ಟಿರುವ ಸಂಗತಿಯೂ ಕೂಡ ಬೆಳಕಿಗೆ ಬಂದಿದೆ. ಮಗಳ ಮೇಲಿನ ದಾಳಿಯಿಂದ ತೀವ್ರ ನೊಂದುಕೊಂಡಿದ್ದ ತಂದೆ ಘಟನೆ ನಡೆದು 15 ದಿನಗಳ ಬಳಿಕ ಮೃತಪಟ್ಟಿದ್ದಾರೆ. ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ ಇರುವ ಬಗ್ಗೆ ಆತಂಕಕ್ಕೊಳಗಾಗಿದ್ದರು. ಮುಂದೆ ಜೈಲಿನಿಂದ ಹೊರಬಂದ ನಂತರ ದಾಳಿಕೋರ ನಮ್ಮ ಮಗಳ ಮೇಲೆ ಏನಾದರೂ ಮಾಡಬಹುದು ಎಂಬ ಆತಂಕ ಅವರನ್ನು ಕಾಡಿದೆ. ಇದೇ ನೋವಿನಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮನೆಯಲ್ಲಿ ತಾಯಿ ಜೊತೆಗೆ ಆ ಇಬ್ಬರು ಹೆಣ್ಣು ಮಕ್ಕಳು ವಾಸ ಮಾಡುತ್ತಿದ್ದು ಪ್ರಕರಣದ ಬಗ್ಗೆ ಏನೂ ಹೇಳುವುದಿಲ್ಲ ಎಂದು ಸಂತ್ರಸ್ತ ನರ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಹಲ್ಲೆ
