ಬೆಳಗಾವಿ : ಬೆಳಗಾವಿ ಮಹಾಂತೇಶನಗರ ಕೆಎಂಎಫ್ ಡೈರಿ ಬಳಿ ಬುಧವಾರ ಗುಂಡಿನ ದಾಳಿ ನಡೆದಿದೆ.
ಟಿಳಕವಾಡಿ ದ್ವಾರಕಾ ನಗರ ಐದನೇ ಕ್ರಾಸ್ ನಿವಾಸಿ ಪ್ರಣೀತ್ ಕುಮಾರ್( 31) ಎಂಬ ಯುವಕನ ಮೇಲೆ ಈ ದಾಳಿ ನಡೆದಿದೆ. ಇದರಿಂದ ಪ್ರಣಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವೈಯಕ್ತಿಕ ದ್ವೇಷ ಕಾರಣಕ್ಕೆ ಈ ದಾಳಿ ನಡೆದಿರುವ ಬಗ್ಗೆ ಅನುಮಾನ ಇದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಂಡಿನ ದಾಳಿ; ಗಂಭೀರ ಗಾಯಗೊಂಡ ಯುವಕ
