ಬೆಳಗಾವಿ: ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಅರಗನ ಕೆರೆಯಲ್ಲಿ ಓರ್ವ ಬಾಲಕ ಹಾಗೂ ಮಹಿಳೆ ಶವ ಕಂಡುಬಂದಿದೆ. ತಾಯಿ ಮತ್ತು ಮಗನ ಶವವೆಂದು ಗುರುತಿಸಲಾಗಿದೆ.

ಮೃತಪಟ್ಟವರ ಹತ್ತಿರ ಸಿಕ್ಕಿರುವ ಆತ್ಮಹತ್ಯಾ ಪತ್ರದ ಪ್ರಕಾರ ಖಲಕಾಂಬ ನಿವಾಸಿಗಳಾದ ಕವಿತಾ ಬಸವಂತ್ ಜುನೇಬೆಳಗಾಂವ್ಕರ್ (40) ಹಾಗೂ ಅವರ ಮಗ ಸಮರ್ಥ ಬಸವಂತ್ ಜುನೇಬೆಳಗಾಂವ್ಕರ್ (14) ಎಂದು ಗುರುತಿಸಲಾಗಿದೆ.
ಕೆರೆಯಲ್ಲಿ ತೆಲುತ್ತಿದ್ದ ತಾಯಿ ಮಕ್ಕಳ ಶವವನ್ನು ಸೇನಾಡಳಿತವು ಮೊದಲು ಗಮನಿಸಿ, ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯ ಅಧಿಕಾರಿಗಳು, ಎಚ್‌ಇಆರ್‌ಎಫ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಸಂಘಟನೆಗಳ ಸ್ವಯಂಸೇವಕರಾದ ಬಸವರಾಜ ಹಿರೇಮಠ, ಸಂತೋಷ ದಾರೇಕರ, ಮತ್ತು ಅವಧೂತ್ ತುಡ್ವೇಕರ ಸೇರಿದಂತೆ ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆಯಲು ಸಹಕರಿಸಿದರು.

ಕ್ಯಾಂಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.