ಬೆಳಗಾವಿ,: ಶ್ರೀ ಎಸ್ ಎಸ್ ಜಂಬಗಿ ಮೆಮೋರಿಯಲ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿತವಾಗಿರುವ ಜಂಬಗಿ ಸೂಪರ್ಸ್ಪೆಷಲಿಟಿ ನೇತ್ರ ಸಂಸ್ಥೆ ಮತ್ತು ಬೆಳಗಾವಿ ಲೇಸರ್ ಅಂಡ್ ಕಾಂಟ್ಯಾಕ್ಟ ಲೆನ್ಸ್ ಕ್ಲಿನಿಕ್ ಇದೇ ರವಿವಾರ ದಿ. 22 ಫೆಬ್ರುವರಿ 2026 ರಂದು ಬೆಳಗ್ಗೆ 10.30ಕ್ಕೆ ಜನಸೇವೆಗೆ ಅರ್ಪಿತವಾಗಲಿದೆ. ನೂತನವಾಗಿ ನಿರ್ಮಿಸಲಾದ ಆಸ್ಪತ್ರೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ.

ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಸಂಸ್ಥೆಯ ಡಾ. ಲಕ್ಷ್ಮಣ ಜಂಬಗಿ ಅವರು,ಸಮಾರಂಭದ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ, ಸಂಸದರಾದ ಜಗದೀಶ್ ಶೆಟ್ಟರ, ಪ್ರಯಾಂಕಾ ಜಾರಕಿಹೊಳಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ರಾಜು ಕಾಗೆ, ದುರ್ಯೋಧನ ಐಹೊಳೆ, ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ಮಹಾಂತೇಶ ಕೌಜಲಗಿ, ರಾಜು ಶೆಟ್‌, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಖನ ಜಾರಕಿಹೊಳಿ, ಮಾಜಿ ಶಾಸಕರಾದ ಪ್ರಕಾಶ ಹುಕ್ಕೇರಿ, ಮುರುಗೇಶ್ ನಿರಾಣಿ ಪಿ ರಾಜೀವ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣರಾವ್‌ ಚಿಂಗಳೆ,ಕ್ರೆಡಾಯನ ಮಾಜಿ ಅಧ್ಯಕ್ಷರಾದ ರಾಜೇಶ ಹೆಡಾ, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಅವಿನಾಶ್ ಪೋತದಾರ ಆಗಮಿಸಲಿದ್ದಾರೆ. ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಡಾ. ವರ್ಷಾ ಜಂಬಗಿ, ಡಾ.ಅಮೋಘ ಜಂಬಗಿ, ಡಾ.ಹೇಮಂತ, ಡಾ.ಜಗದೀಶ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು.