ಕರ್ನಾಟಕ ವಿಧಾನಸಭೆಯ ಪ್ರಸಕ್ತ ಚುನಾವಣೆಯಲ್ಲಿ ನೋಟಾ ಮತಗಳು ಕೂಡ ಅಧಿಕವಾಗಿವೆ. ಅದರಂತೆ ಠೇವಣಿಯನ್ನು ಕಳೆದುಕೊಂಡವರ ಸಂಖ್ಯೆಯೂ ಅಧಿಕವಾಗಿದೆ. ರಾಜ್ಯದಲ್ಲಿ ಒಟ್ಟು ಸುಮಾರು 3.84 ಕೋಟಿ ಜನರು ಮತದಾನ ಮಾಡಿದ್ದು, ಅದರಲ್ಲಿ 2,69,763 (0.69%) ಮತದಾರರು ನೋಟಾ ಒತ್ತುವದರ ಮೂಲಕ ಪಟ್ಟಿಯಲ್ಲಿರುವ ಯಾವುದೇ ವ್ಯಕ್ತಿಗಳು ಒಳ್ಳೆಯರೆನಿಸಿಲ್ಲ ಎಂದಿದ್ದಾರೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಸುಮಾರು 17180 ನೋಟಾ ಮತಗಳು ಇವಿಎಂನಲ್ಲಿ ದಾಖಲಾಗಿವೆ. ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಉತ್ತರ 1161 (0.78%)ಬೆಳಗಾವಿ ದಕ್ಷಿಣ 1599 (1%) ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ1165 (0.57%) ಅದರಲ್ಲಿ ರಾಯಬಾಗ ಕ್ಷೇತ್ರದಲ್ಲಿ 1860 ನೋಟಾ ಮತಗಳು ಚಲಾವಣೆಯಾಗಿದ್ದು ಅತ್ಯಧಿಕ.
ರಾಜ್ಯದಲ್ಲಿ ಬಿಜೆಪಿ 31, ಕಾಂಗ್ರೆಸ್ 12, ಆಮ್ ಆದಮಿ ಪಾರ್ಟಿಯ 208, ಎಸಡಿಪಿಐ 15 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದ 187 ಅಭ್ಯರ್ಥಿಗಳ ಪೈಕಿ 139 ಜನರು ತಮ್ಮ ಠೇವಣಿಯನ್ನು ಕಳೆದುಕೊಂಡರೆ ಕೇವಲ 48 ಅಭ್ಯರ್ಥಿಗಳು ಮಾತ್ರ ಠೇವಣಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2013ರಲ್ಲಿ ಇವಿಎಂ ಮತಯಂತ್ರಗಳಲ್ಲಿ ನೋಟಾ ಆಯ್ಕೆಯನ್ನು ಪರಿಚಯಿಸಲಾಯಿತು. ಸವ್ರೋಚ್ಚ ನ್ಯಾಯಾಲಯದ ಆದೇಶಕ್ಕಿಂತ ಮೊದಲು, 1961ರ ಚುನಾವಣಾ ನಿಯಮ 49-o ಪ್ರಕಾರ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಒಲವು ತೋರದವರು ತಮ್ಮ ನಿರ್ಧಾರದ ಆಯ್ಕೆಯನ್ನು ಹೊಂದಿದ್ದಾರೆ. ಚುನಾವಣಾ ಸಮಿತಿಗಾಗಿ ನೋಟಾ ಚಿಹ್ನೆಯನ್ನು ಅಹಮದಾಬಾದನ ನ್ಯಾಶನಲ್ ಇನ್ಸಟಿಟ್ಯೂಟ್ ಆಫ್ ಡಿಸೈನ್ ವಿನ್ಯಾಸಗೊಳಿಸಿದೆ.
ಕ್ಷೇತ್ರವಾರು ನೋಟಾ ಮತಗಳು ಈ ಕೆಳಗಿನ ಪಟ್ಟಿಯಲ್ಲಿವೆ.
ಕ್ರ. ಸಂ | ಕ್ಷೇತ್ರ | ಗೆಲವು/ಪಡೆದ ಮತಗಳು | ದ್ವೀತೀಯ ಸ್ಥಾನ | ನೋಟಾ ಮತಗಳು | ಶೇಕಡಾವಾರು ನೋಟಾ ಮತ |
1 | ನಿಪ್ಪಾಣಿ | ಶಶಿಕಲಾ ಜೊಲ್ಲೆ (ಬಿಜೆಪಿ) | ಉತ್ತಮ ಪಾಟೀಲ(ಪಕ್ಷೇತರ) | 919 | 0.49 |
73625 | 66224 | ||||
2 | ಚಿಕ್ಕೋಡಿ ಸದಲಗಾ | ಗಣೇಶ ಹುಕ್ಕೇರಿ (ಕಾಂಗ್ರೆಸ) | ರಮೇಶ್ ಕತ್ತಿ (ಬಿಜೆಪಿ) | 957 | 0.52 |
128349 | 78509 | ||||
3 4 | ಅಥಣಿ | ಲಕ್ಷ್ಮಣ ಸವದಿ (ಕಾಂಗ್ರೆಸ) | ಮಹೇಶ ಕುಮಟಳ್ಳಿ (ಬಿಜೆಪಿ) | 1037 | 0.54 |
131404 | 76122 | ||||
ಕಾಗವಾಡ | ಭರಮಗೌಡಾ ಕಾಗೆ (ಕಾಂಗ್ರೆಸ) | ಶ್ರೀಮಂತ ಬಿ ಪಾಟೀಲ (ಬಿಜೆಪಿ) | 985 | 0.61 | |
83387 | 74560 | ||||
5 | ಕುಡಚಿ | ಮಹೇಂದ್ರ ತಮ್ಮಣ್ಣವರ | ಪಿ. ರಾಜೀವ | 643 | 0.43 |
83321 | 60078 | ||||
6 | ರಾಯಭಾಗ | ಐಹೋಳೆ ದುರ್ಯೋಧನ (ಬಿಜೆಪಿ) | ಶಂಭು ಕಲ್ಲೋಳಿಕರ(ಪಕ್ಷೇತರ) | 1860 | 1.13 |
57500 | 54930 | ||||
7 | ಹುಕ್ಕೇರಿ | ನಿಖಿಲ್ ಕತ್ತಿ (ಬಿಜೆಪಿ) | ಎ ಬಿ ಪಾಟೀಲ (ಕಾಂಗ್ರೆಸ್) | 1168 | 0.7 |
103574 | 61023 | ||||
8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ(ಬಿಜೆಪಿ) | ಭೀಮಪ್ಪ ಗಡಾದ (ಪಕ್ಷೇತರ) | 930 | 0.49 |
48277 | 19935 | ||||
9 | ಗೋಕಾಕ | ರಮೇಶ ಜಾರಕಿಹೊಳಿ(ಬಿಜೆಪಿ) | ಕಡಾಡಿ ಮಹಾಂತೇಶ (ಕಾಂಗ್ರೆಸ್) | 1060 | 0.56 |
105313 | 79901 | ||||
10 | ಯಮಕನಮರಡಿ | ಸತೀಶ ಜಾರಕಿಹೊಳಿ(ಕಾಂಗ್ರೆಸ್) | ಬಸವರಾಜ ಹುಂದ್ರಿ (ಬಿಜೆಪಿ) | 996 | 0.6 |
100290 | 43079 | ||||
11 | ಬೆಳಗಾವಿ ಉತ್ತರ | ಆಸಿಫ್ ಸೇಟ್ (ಕಾಂಗ್ರೆಸ್) | ಡಾ. ರವಿ ಪಾಟೀಲ(ಬಿಜೆಪಿ) | 1161 | 0.78 |
66970 | 56959 | ||||
12 | ಬೆಳಗಾವಿ ದಕ್ಷಿಣ | ಅಭಯ ಪಾಟೀಲ (ಬಿಜೆಪಿ) | ರಮಾಕಾಂತ ಕೊಂಡುಸ್ಕರ( ಪಕ್ಷೇತರ | 1599 | 1 |
77094 | 64786 | ||||
13 | ಬೆಳಗಾವಿ ಗ್ರಾಮೀಣ | ಲಕ್ಷ್ಮಿ ಹೆಬ್ಬಾಳಕರ (ಕಾಂಗ್ರೆಸ್) | ನಾಗೇಶ ಮನ್ನೋಳಕರ ( ಬಿಜೆಪಿ | 1165 | 0.57 |
107619 | 51603 | ||||
14 | ಖಾನಾಪೂರ | ವಿಠ್ಠಲ ಹಲಗೇಕರ (ಬಿಜೆಪಿ) | ಡಾ. ಅಂಜಲಿ ನಿಂಬಾಳಕರ(ಕಾಂಗ್ರೆಸ್) | 1236 | 0.77 |
91834 | 37205 | ||||
15 | ಕಿತ್ತೂರು | ಬಾಬಾಸಾಹೇಬ ಪಾಟೀಲ (ಕಾಂಗ್ರೆಸ್) | ದೊಡ್ಡಗೌಡರ ಮಹಾಂತೇಶ(ಬಿಜೆಪಿ) | 564 | 0.36 |
77536 | 74543 | ||||
16 | ಬೈಲಹೊಂಗಲ | ಮಹಾಂತೇಶ ಕೌಜಲಗಿ (ಕಾಂಗ್ರೆಸ) | ಜಗದೀಶ ಮೆಟಗುಡ್(ಬಿಜೆಪಿ) | 1319 | 0.86 |
58408 | 55630 | ||||
17 | ಸವದತ್ತಿ ಯಲ್ಲಮ್ಮ | ವಿಶ್ವಾಸ ವೈದ್ಯ (ಕಾಂಗ್ರೆಸ್) | ಮಾಮನಿ ರತ್ನಾ ಆನಂದ | 586 | 0.36 |
71224 | 56529 | ||||
18 | ರಾಮದುರ್ಗ | ಅಶೋಕ ಪಟ್ಟಣ (ಕಾಂಗ್ರೆಸ್) | ಚಿಕ್ಕರೇವಣ್ಣ (ಬಿಜೆಪಿ) | 1646 | 1.07 |
80294 | 68564 |