ಬೆಳಗಾವಿ: ವಿಶ್ವದಾದ್ಯಂತ 3 ಲಕ್ಷಕ್ಕೂ ಅಧಿಕ ಮಕ್ಕಳು ಪ್ರತಿವರ್ಷ ಕ್ಯಾನ್ಸರಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಸುಮಾರು 2.23 ಲಕ್ಷ ಮಕ್ಕಳು ಭಾರತದವರಾಗಿದ್ದು ಅತ್ಯಂತ ಕಳವಳಕಾರಿ. ಬಾಲ್ಯದ ಕ್ಯಾನ್ಸರ ಸರಿಯಾದ ಸಮಯಕ್ಕೆ ಕಂಡು ಹಿಡಿದು ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ. 80ರಷ್ಟು ಮಕ್ಕಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗುತ್ತಾರೆ. ಆದರೆ ಭಾರತದಲ್ಲಿ ಇದು ಶೇ. 60ರಷ್ಟು ಮಾತ್ರ ಇದೆ. ಕಾರಣ ಚಿಕಿತ್ಸೆ ದೊರೆಯುವಲ್ಲಿ ಆಗುತ್ತಿರುವ ವಿಳಂಬ. ಭಾರತದಲ್ಲಿ ಬಾಲ್ಯಕ್ಯಾನ್ಸರ ಕುರಿತು ಜನರಲ್ಲಿ ಅರಿವು ಕಡಿಮೆ. ಇದರಿಂದಾಗಿ ಮಕ್ಕಳಲ್ಲಿ ಕ್ಯಾನ್ಸರ ಲಕ್ಷಣಗಳು ಕಂಡು ಬಂದರೂ ಕೂಡ ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗುತ್ತದೆ. ಅಲ್ಲದೇ ಕ್ಯಾನ್ಸರ ಎಂದು ತಿಳಿದ ಮೇಲೂ ಕೂಡ ಚಿಕಿತ್ಸೆಗಾಗಿ ಎಲ್ಲಿ ಕರೆದುಕೊಂಡು ಹೋಗಬೇಕು, ಯಾವ ರೀತಿಯ ಚಿಕಿತ್ಸೆ ಹಾಗೂ ಕಾಳಜಿ ವಹಿಸಬೇಕು ಎಂಬುದು ಪೋಷಕರಿಗೂ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೂ ತಿಳಿದಿರುವುದಿಲ್ಲ. ಇದರಿಂದಾಗಿ ಹಲವಾರು ಮಕ್ಕಳು ಚಿಕಿತ್ಸೆ ಲಭಿಸದೇ ಮರಣಹೊಂದುತ್ತಾರೆ.
ಬಾಲ್ಯ ಕ್ಯಾನ್ಸರ ಚಿಕಿತ್ಸೆಯು ಬೆರಳಣಿಕೆಯ ಆಸ್ಪತ್ರೆಗಳಲ್ಲಿ ಮಾತ್ರವೇ ಇದ್ದು, ಚಿಕಿತ್ಸಾವೆಚ್ಚ ದುಬಾರಿಯಾಗಿರುತ್ತದೆ. ಈ ಕಾರಣದಿಂದಾಗಿ ಹಲವಾರು ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. ಭಾರತದಲ್ಲಿ ರೋಗ ಪೀಡಿತ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕ್ಯಾನ್ಸರ ನುರಿತ ತಜ್ಞವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವದರಿಂದ ಮಕ್ಕಳಿಗೆ ಚಿಕಿತ್ಸೆ ಲಭಿಸುವದು ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಚಿಕ್ಕಮಕ್ಕಳ ಕ್ಯಾನ್ಸರ ತಜ್ಞವೈದ್ಯೆ ಡಾ. ಅಭಿಲಾಷಾ ಎಸ್. ಅವರು.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ: ರಕ್ತದ ಕ್ಯಾನ್ಸರ, ದುಗ್ದರಸ್ ಗ್ರಂಥಿ, ಮೆದುಳು, ನರ,ಕಿಡ್ನಿ, ಮೂಳೆ ಮಾಂಸ ಖಂಡಗಳ ಕ್ಯಾನರ ಸೇರಿದಂತೆ ಹಲವು ರೀತಿಯ ಕ್ಯಾನ್ಸರ ಕಂಡು ಬರುವ ಸಾಧ್ಯತೆ ಇದೆ. ಕ್ಯಾನ್ಸರನ್ನು ಗುಣಪಡಿಸುವಲ್ಲಿ ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆಯೆಂದರೆ ಅದನ್ನು ಆದಷ್ಟು ಬೇಗ ಕಂಡುಹಿಡಿದು ಸೂಕ್ತ ಚಿಕಿತ್ಸೆಯನ್ನು ನೀಡುವದು.
ಸಹಜವಾಗಿ ಶೇ.21ರಷ್ಟು ಕ್ಯಾನ್ಸರ ಮಕ್ಕಳಲ್ಲಿ ಕಂಡು ಬರುವ ಲಕ್ಷಣಗಳು
• ದೀರ್ಘಕಾಲದಿಂದ ಜ್ವರ
• ಹೊಟ್ಟೆ ಉಬ್ಬರ ಅತವಾ ಯಾವುದಾದರೂ ಗಡ್ಡೆ,
• ಕೆಂಪುರಕ್ತ ಕಡಿಮೆಯಾಗಿ ಬಿಳಚಿಕೊಳ್ಳುವದು. ಬಹಳ ಬೇಗ ಸುಸ್ತಾಗುವದು. ತೂಕ ಕಡಿಮೆಯಾಗುವದು.
• ನಿರಂತರವಾಗಿ ಮೂಳೆ ನೋವು.
• ನಿರಂತರವಾದ ತಲೆನೋವು ಮತ್ತು ವಾಂತಿ
• ಚರ್ಮದಡಿ ರಕ್ತ ಹೆಪ್ಪುಗಟ್ಟಿ ನೀಲಿ ಬಣ್ಣವಾಗುವದು. ಸಣ್ಣಗಾಯವಾದರೂ ಬಹಳ ರಕ್ತಸ್ರಾವವಾಗುವದು.
• ಕಣ್ಣಲ್ಲಿ ಬಿಳಿ ಪೊರೆ, ದೃಷ್ಠಿಯಲ್ಲಿ ವ್ಯತ್ಯಾಸ
ಭಾರತದಲ್ಲಿ ಬಾಲ್ಯ ಕ್ಯಾನ್ಸರ ಚಿಕಿತ್ಸೆಯ ಸಂಬಂಧ ಹಲವಾರು ಅಡೆತಡೆಗಳಿದ್ದು, ಅವುಗಳನ್ನೆಲ್ಲಾ ಮೆಟ್ಟಿ ಎಲ್ಲ ಕ್ಯಾನ್ಸರ ಮಕ್ಕಳಿಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕಿಸುವದಕ್ಕಾಗಿ ಹಲವಾರು ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ. ಆದರೂ ಸಹ ಹಲವು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ನರಳುತ್ತಿವೆ. ಆದ್ದರಿಂದ ಆದಷ್ಟು ಬೇಗ ಈ ಅಡೆತಡೆಗಳನ್ನು ಮೀರಿ ಕ್ಯಾನ್ಸರ ಮಕ್ಕಳಿಗೆ ನಗಧಿತ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ದೊರಕಿಸಬೇಕಾಗಿದ್ದು, ನಾವೆಲ್ಲರೂ ಕೈಜೋಡಿಸೋಣ.
• ಜನರಲ್ಲಿ ಬಾಲ್ಯ ಕ್ಯಾನ್ಸರ ಬಗ್ಗೆ ಅರಿವು ಮೂಡಸಬೆಕು.
• ಆರೋಗ್ಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಪೂರೈಸಬೇಕು.
• ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು.
• ಕ್ಯಾನ್ಸರ ಚಿಕಿತ್ಸಾ ಕೇಂದ್ರಗಳ ಸಂಪನ್ಮೂಲಗಳನ್ನು ಹೆಚ್ಚಿಸಬೇಕು.
• ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಕಳೆದ 7 ವರ್ಷಗಳಿಂದ ಮಕ್ಕಳ ಕ್ಯಾನ್ಸರ ಚಿಕಿತ್ಸಾ ವಿಭಾಗವು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 500ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ ಕೇವಲ ಕ್ಯಾನ್ಸರ ಪೀಡಿತ ಮಕ್ಕಳಿಗಾಗಿ ಮೀಸಲಾದ ಏಕೈಕ ಕೇಂದ್ರವಾಗಿದೆ. ವಿಭಾಗ ಮುಖ್ಯಸ್ಥರಾದ ಡಾ. ಅಭಿಲಾಷಾ ಅವರ ಪ್ರಕಾರ, ಪ್ರತಿ ವರ್ಷ ಸುಮಾರು 70-80ರಷ್ಟು ಮಕ್ಕಳು ಕ್ಯಾನ್ಸರನಿಂದ ಬಳಲುತ್ತಿರುವದು ಕಂಡು ಬರುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಆದರೆ ಅವರಲ್ಲಿ ಕೇವಲ ಶೇ. 20ರಷ್ಟು ಜನರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಯಾವುದೇ ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗದAತೆ ಕ್ರಮವಹಿಸಲಾಗುತ್ತಿದೆ.
ಡಾ. ಅಭಿಲಾಷಾ ಎಸ್
ಚಿಕ್ಕಮಕ್ಕಳ ಕ್ಯಾನ್ಸರ ತಜ್ಞವೈದ್ಯರು
ಕೆಎಲ್‌ಇ ಸಂಸ್ಥೆಯ
ಡಾ.ಪ್ರಭಾಕರ ಕೋರೆ ಆಸ್ಪತ್ರೆ